Spread the love

ಪಡುಬಿದ್ರಿ: ಆಗಸ್ಟ್ ೭(ಹಾಯ್ ಉಡುಪಿ ನ್ಯೂಸ್) ನಂದಿಕೂರು ನಿವಾಸಿ ಗಂಡ ಹೆಂಡತಿ ಇಬ್ಬರೂ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಕಾಪು, ನಂದಿಕೂರು, ಅಡ್ವೆ, ಶಿಫಾ ಮಂಜಿಲ್ ನಿವಾಸಿ ಶೇಖ್ ಸಾಹಿಲ್(26) ಇವರ ತಂಗಿ ಶಿಫಾ ಶೇಖ್ (25) ಹಾಗೂ ಬಾವ ರಿಯಾಜ್ (28) ಎಂಬುವವರು ಇಬ್ಬರೂ ಪ್ರೀತಿಸಿ 2 ವರ್ಷಗಳ ಹಿಂದೆ ಮದುವೆಯಾಗಿ, ಕಳೆದ ಒಂದು ವರ್ಷದಿಂದ ಕಾಪು ತಾಲೂಕು ನಂದಿಕೂರು ಗ್ರಾಮದ ಅಡ್ವೆಯಲ್ಲಿ ಶೇಖ್ ಸಾಹಿಲ್ ರೊಂದಿಗೆ ವಾಸವಿದ್ದು, ರಿಯಾಜ್‌ನು ಉಚ್ಚಿಲದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು,  ಅವರ ಎರಡೂವರೆ ತಿಂಗಳ ಹೆಣ್ಣು ಮಗುವು ಅನಾರೋಗ್ಯದಿಂದ ಒಂದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಮೃತಪಟ್ಟಿದ್ದು, ಅಲ್ಲಿಯೇ ಅದರ ಅಂತ್ಯ ಸಂಸ್ಕಾರ ಮಾಡಿ ಬಂದಿರುತ್ತಾರೆ. ನಂತರ ದಿನಾಂಕ: 01/08/2022 ರಂದು ಶೇಖ್ ಸಾಹಿಲ್ ರು ಕೆಲಸಕ್ಕೆಂದು  ಮನೆಯಿಂದ ಹೋಗಿದ್ದು, ಅವರ ತಂಗಿ ಶಿಫಾ ಶೇಖ್ ಮತ್ತು ಬಾವ ರಿಯಾಜ್ ರವರು ಸಂಜೆ 6:30 ಗಂಟೆಯ ವೇಳೆಗೆ ಮನೆಯಿಂದ ಯಾರಿಗೂ ಹೇಳದೇ ಹೋಗಿದ್ದು, ಈವರೆಗೂ ವಾಪಾಸ್ಸು ಬಂದಿರುವುದಿಲ್ಲ ಮತ್ತು ರಿಯಾಜ್‌ರವರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಲ್ಲಿ ಸ್ವಿಚ್ ಆಫ್ ಬರುತ್ತಿದ್ದು, ನಂತರ ಸಂಬಂಧಿಕರ ಮನೆಗಳಲ್ಲಿ, ಪರಿಚಯದವರಲ್ಲಿ ವಿಚಾರಿಸಿ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ ಎಂದು ಶೇಖ್ ಸಾಹಿಲ್ ಪೊಲೀಸ ರಿಗೆ ದೂರು ನೀಡಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಗಂಡಸು ಮತ್ತು ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!