ಕೋಟ: (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಮಟ್ಕಾ ಜುಗಾರಿ ಆಡುತ್ತಿದ್ದವರನ್ನು ಪೊಲೀಸರು ಬಂಧಿಸಿರುವ ಘಟನೆ ಕೋಟದಲ್ಲಿ ನಡೆದಿದೆ.
ಕೋಟ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಧು ಬಿ.ಇ ಯವರು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಣೂರು ಗ್ರಾಮದ ರಾಜಲಕ್ಷೀ ಸಭಾಭವನದ ಹತ್ತಿರ ಸರ್ವಿಸ್ ರಸ್ತೆಯಲ್ಲಿ ಒಂದು ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬೀಟ್ ಸಿಬ್ಬಂದಿಯವರು ಮಾಹಿತಿ ನೀಡಿದ್ದು ಕೂಡಲೇ ಇಲಾಖಾ ಜೀಪಿನಲ್ಲಿ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಒಂದು ಕಾರು ನಿಂತಿದ್ದು ಸಾರ್ವಜನಿಕರು ಕಾರಿನ ಹತ್ತಿರ ಗುಂಪು ಸೇರಿದ್ದು , ಓರ್ವ ವ್ಯಕ್ತಿ 1 ರೂಪಾಯಿಗೆ 70 ರೂಪಾಯಿ ಎಂದು ಕೂಗುತ್ತಿದ್ದು ಸಂಖ್ಯೆಗಳ ಮೇಲೆ ಸಾರ್ವಜನಿಕರು ಹಣವನ್ನು ಪಣವಾಗಿಟ್ಟು ಮಟ್ಕಾ ಜೂಜಾಟ ನಡೆಸುತ್ತಿರುವುದು ಕಂಡು ಬರುತ್ತದೆ. ಕೂಡಲೇ ಪೋಲಿಸರು ದಾಳಿ ನಡೆಸಿ ಸುತ್ತುವರಿದು ಅವರನ್ನು ಹಿಡಿದು ವಿಚಾರಿಸಿದಾಗ ಅವರುಗಳು ತಮ್ಮ ಸ್ವಂತ ಲಾಭಕ್ಕಾಗಿ ಮಟ್ಕಾ ಜೂಜಾಟದಲ್ಲಿ ನಿರತರಾಗಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ ಎನ್ನಲಾಗಿದೆ. ಬ್ರಹ್ಮಾವರ ತಾಲೂಕು,ಗಿಳಿಯಾರು ಗ್ರಾಮದ ಹರ್ತಟ್ಟು ನಿವಾಸಿ ಪ್ರವೀಣ ಹಾಗೂ ಬ್ರಹ್ಮಾವರ ತಾಲೂಕು ,ಗಿಳಿಯಾರು ಗ್ರಾಮ ಹರ್ತಟ್ಟು ನಿವಾಸಿ ರಾಘವೇಂದ್ರ ಎಂಬವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಹಾಗೂ ಮಟ್ಕಾ ಚೀಟಿ, ಬಾಲ್ ಪೆನ್, ನಗದು ರೂ. 3,400/- ಮತ್ತು ಶಿಫ್ಟ್ ಕಾರು KA 20 MD 0670 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.