Spread the love

ಕುಂದಾಪುರ: ಆಗಸ್ಟ್ 7 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ಆಡುತ್ತಿದ್ದ ೭ ಜನರನ್ನು ಬಂಧಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರ ಪೊಲೀಸ್ ಠಾಣೆ ಪಿಎಸ್ಐ ಸದಾಶಿವ ಆರ್ ಗವರೋಜಿರವರು ದಿನಾಂಕ 06/08/2022 ರಂದು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಟಿ.ಟಿ ರೋಡ್ ಎಂಬಲ್ಲಿನ ನೀರಿನ ಟ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಖಚಿತ ವರ್ತಮಾನದಂತೆ ಇಲಾಖಾ ವಾಹನದಲ್ಲಿ ಸಿಬ್ಬಂದಿಯವರೊಂದಿಗೆ  ಸ್ಥಳಕ್ಕೆ ತಲುಪಿದಾಗ 7 ಜನರು ಗುಂಪಾಗಿ ಕುಳಿತು ಅಂದರ್ ಬಾಹರ್ ಅದೃಷ್ಟದ ಜುಗಾರಿ ಆಟವನ್ನು ಆಡುತ್ತಿದ್ದು ,ಅಲ್ಲಿಗೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ವಿಶ್ವನಾಥ, ಗಣೇಶ ದೇವಾಡಿಗ, ರತ್ನಾಕರ, ಬೀರಪ್ಪ ಗೌಡರ್, ದೇವ, ಮಂಜುನಾಥ, ಶ್ರೀಕಾಂತ ಬ ಗೌಡರ್, ಎಂಬುವವರನ್ನು ಬಂಧಿಸಿ ವಶಕ್ಕೆ ಪಡೆದು, ಇಸ್ಪೀಟ್ ಆಟಕ್ಕೆ ಬಳಸಿದ್ದ  52 ಇಸ್ಪೀಟು ಎಲೆಗಳು, ಹಳೆ ಪೇಪರ್, 5950/-ರೂಪಾಯಿ ನಗದು ಹಣವನ್ನು ಸ್ವಾದೀನಕ್ಕೆ ಪಡೆದುಕೊಂಡಿರುತ್ತಾರೆ.. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!