ಕುಂದಾಪುರ: ಆಗಸ್ಟ್ ೬(ಹಾಯ್ ಉಡುಪಿ ನ್ಯೂಸ್) ಶಾಲೆಯಿಂದ ಬರುತ್ತಿದ್ದ ಮಗುವಿಗಾಗಿ ಕಾಯುತ್ತಿದ್ದ ಮಹಿಳೆಗೆ ಹಲ್ಲೆ ಮಾಡಿ ಚಿನ್ನಾಭರಣ ಕದ್ದ ಘಟನೆ ಕೊರ್ಗಿಯಲ್ಲಿ ನಡೆದಿದೆ.
ಕುಂದಾಪುರದ ಕೊರ್ಗಿ ಗ್ರಾಮದ ನಿವಾಸಿ ರಾಮ ಪೂಜಾರಿ ಇವರ ಮಗಳು ದೇವಕಿ ( 35 ವರ್ಷ) ರವರು ದಿನಾಂಕ: 05.08.2022 ರಂದು ಸಂಜೆ 04:30 ಗಂಟೆಗೆ ಮನೆಯಿಂದ ಆಕೆಯ ಮಗ ನನ್ನು ಶಾಲೆಗೆ ಹೋಗಿದ್ದವನನ್ನು ಕರೆದುಕೊಂಡು ಬರಲು ಮನೆಯಿಂದ ಹೋಗಿದ್ದು, ಕೊರ್ಗಿ ಕ್ರಾಸ್‌ಬಳಿ 4:15 ಗಂಟೆಯಿಂದ 4:25 ಗಂಟೆಯ ಮದ್ಯದಲ್ಲಿ ಓಣಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಆಕೆಯ ತಲೆಯ ಹಿಂಬದಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಆಕೆಯನ್ನು ನೆಲಕ್ಕೆ ಬಿಳಿಸಿ ನಂತರ ಆಕೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಆಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಪರಿಚಿತ ವ್ಯಕ್ತಿಯು ಪುನ: ಪುನ: ರಾಡ್‌ನಿಂದ ಆಕೆಯ ತಲೆಗೆ ಹೊಡೆದು ಹಲ್ಲೆ ಮಾಡಿ ನಂತರ ಆಕೆಯ ಕರಿಮಣಿ ಸರ, ಒಂದು ಬಳೆ ಮತ್ತು ಒಂಕಿ ಉಂಗುರವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಅಲ್ಲೆ ಪಕ್ಕದಲ್ಲಿರುವ ಹಾಡಿಯಲ್ಲಿ ಓಡಿ ಹೋಗಿದ್ದು, ಪಕ್ಕದ ಮನೆಯ ಪಾರ್ವತಿ ಶೆಡ್ತಿ ಎಂಬವರು ಕೂಡಲೇ ದೇವಕಿಯನ್ನು ಕೊರ್ಗಿಯ ರಘುರಾಮ ಶೆಟ್ಟಿ ಎಂಬವರ ರಿಕ್ಷಾದಲ್ಲಿ ಹಾಕಿಕೊಂಡು ಕೊಟೇಶ್ವರ ಎನ್.ಆರ್‌ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಎನ್.ಆರ್‌ಆಚಾರ್ಯ ಆಸ್ಪತ್ರೆಯ ವೈದ್ಯರು ದೇವಕಿಯನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಆಕೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಲಾಗಿದೆ.
ದೇವಕಿಯವರು ಧರಿಸಿದ್ದ ಕರಿಮಣಿ ಸರವು ಸುಮಾರು 2 ಪವನ್‌ತೂಕ, ಬಳೆಯು ಸುಮಾರು 2 ½ ಪವನ್‌ತೂಕ ಮತ್ತು ಒಂಕಿ ಉಂಗುರವು ½ ಪವನ್‌ತೂಕದ್ದಾಗಿದ್ದು ಒಟ್ಟು ಅಂದಾಜು ಮೌಲ್ಯ ಸುಮಾರು 1,60,000/- ರೂಪಾಯಿ ಆಗಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಮಗಳಿಗೆ ಹಲ್ಲೆ ಮಾಡಿ ಆಕೆಯು ಧರಿಸಿದ್ದ ಆಭರಣಗಳನ್ನು ಬಲತ್ಕಾರವಾಗಿ ಸುಲಿಗೆ ಮಾಡಿಕೊಂಡು ಹೋಗಿರುವ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಮ ಪೂಜಾರಿಯವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.