ಶಂಕರನಾರಾಯಣ : ಆಗಸ್ಟ್ 6(ಹಾಯ್ ಉಡುಪಿ ನ್ಯೂಸ್) ಗಂಡನೋರ್ವ ನಟ್ಟ ನಡುರಾತ್ರಿ ಪತ್ನಿಗೆ ಕತ್ತಿ ಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಕುಂದಾಪುರ ತಾಲೂಕು ಬೆಳ್ವೆ ಗ್ರಾಮದ ಹೊನ್ಕಲ್‌ಎಂಬಲ್ಲಿನ ರವಿಚಂದ್ರ ಎಂಬವರ ಪತ್ನಿ ಶ್ರೀಮತಿ ಜ್ಯೋತಿ ,( 36 ವರ್ಷ) ಇವರ ಮನೆಯಲ್ಲಿ ದಿನಾಂಕ 05-08-2022 ರಂದು ರಾತ್ರಿ 1-35 ಘಂಟೆಗೆ ಜ್ಯೋತಿಯವರ ಗಂಡ ರವಿಚಂದ್ರನು ಜ್ಯೋತಿ ಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿ ಹಿಡಿದುಕೊಂಡಿದ್ದ ಕತ್ತಿಯನ್ನು ಬೀಸಿದಾಗ ಜ್ಯೋತಿ ಯವರು ತಡೆ ಮಾಡಿದಾಗ ಜ್ಯೋತಿ ಯವರ ಬಲಕೈ ಮೊಣಗಂಟಿನ ಬಳಿ ರಕ್ತಗಾಯವಾಗಿದ್ದು ಕತ್ತಿಯ ತುದಿಯು ಮೂಗಿನ ಬಲಬಾಗಕ್ಕೆ ತಾಗಿ ರಕ್ತಗಾಯವಾಗಿರುತ್ತದೆ. ನಂತರ ಜ್ಯೋತಿ ಯವರು ತಪ್ಪಿಸಿಕೊಂಡು ಹತ್ತಿರದಲ್ಲಿರುವ ಅಕ್ಕನ ಮನೆಗೆ ರಕ್ಷಣೆಗೆ ಓಡುವಾಗ ರವಿಚಂದ್ರನು ಜ್ಯೋತಿಯವರನ್ನು ಉದ್ದೇಶಿಸಿ ನಿನ್ನನ್ನು ಕೊಂದೆ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಈ ಬಗ್ಗೆ ಜ್ಯೋತಿ ಯವರು ನೀಡಿದ ದೂರನಿಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.