ಹೆಬ್ರಿ: ಆಗಸ್ಟ್ 5(ಹಾಯ್ ಉಡುಪಿ ನ್ಯೂಸ್ ) ದೇವಸ್ಥಾನದ ಬೀಗ ಮುರಿದು ಚಿನ್ನಾಭರಣ ಕದ್ದ ಘಟನೆ ಶಿವಪುರದಲ್ಲಿ ನಡೆದಿದೆ.
ಹೆಬ್ರಿ, ಶಿವಪುರ ಗ್ರಾಮದ ಬ್ಯಾಣ, ಮಾರ್ಮಕ್ಕಿ, ಗದ್ದಿಗೆ ಮನೆ ನಿವಾಸಿ ಮಂಜುನಾಥ ನಾಯ್ಕ (27) ಇವರು ಶಿಪಪುರದ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆ ಅಮ್ಮನವರ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದು. ನಿನ್ನೆ ದಿನ ದಿನಾಂಕ; 04/08/2022 ರಂದು ರಾತ್ರಿ 8-30 ಗಂಟೆಯಿಂದ ಈ ದಿನ ದಿನಾಂಕ; 05/08/2022 ರ ಬೆಳಿಗ್ಗೆ 06-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಶಿವಪುರ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆ ಅಮ್ಮನವರ ದೇವಸ್ಥಾನದ ಎದುರಿನ ಬಾಗಿಲಿಗೆ ಹಾಕಿರುವ ಬೀಗವನ್ನು ಯಾವುದೋ ಅಯುಧದಿಂದ ಮುರಿದು ಒಳ ಹೋಗಿ ದೇವಿಯ ಮೂರ್ತಿಗೆ ಹಾಕಿರುವ ಸುಮಾರು ಒಂದೂವರೆ ಪವನಿನ ಚಿನ್ನದ ಕರಿಮಣಿ ಮತ್ತು ಸುಮಾರು ಒಂದೂವರೆ ಪವನ್ ನ 3 ಚಿನ್ನದ ಸಣ್ಣ ಸರ, ಹಾಗೂ ಸಣ್ಣ ಚಿನ್ನದ ತಾಳಿ ಇರುವ ಬೆಳ್ಳಿಯ ಸರ ಹಾಗೂ ಎರಡು ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು. ಕಳವಿನ ಮೌಲ್ಯ ಸುಮಾರು 60,000/-ರೂ ಆಗಬಹುದಾಗಿದೆ ಎಂದು ದೂರು ನೀಡಲಾಗಿದ್ದು ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.