ಎನ್ ಕೌಂಟರ್ ಎನ್ನುವುದು ಒಂದು ಅಕಸ್ಮಿಕ ಸಂದರ್ಭದಲ್ಲಿ ಸ್ಥಳದಲ್ಲಿ ನಿರ್ಮಾಣವಾಗುವ ಅಪಾಯಕಾರಿ ಸನ್ನವೇಶದಲ್ಲಿ ಪೊಲೀಸರು ತಮ್ಮ ಪ್ರಾಣ ರಕ್ಷಣೆಗಾಗಿ ಅನಿವಾರ್ಯವಾಗಿ ತೆಗೆದುಕೊಳ್ಳುವ ತಕ್ಷಣದ ಒಂದು ನಿರ್ಧಾರದಿಂದ ಘಟಿಸುವುದಾಗಿದೆ.
ಎನ್ ಕೌಂಟರ್ ಎನ್ನುವುದು ಪೂರ್ವ ನಿರ್ಧರಿತವಾಗಿರುವುದಿಲ್ಲ ಮತ್ತು ಆಗಿರಲೇಬಾರದು. ಪೂರ್ವ ನಿರ್ಧರಿತವಾದುದು ಒಂದು “ಸಂಚಿನ ಕೊಲೆ”ಯೇ ಹೊರತು ಬೇರೇನೂ ಅಲ್ಲ. ಇಂಥ ಕೊಲೆ ಕೃತ್ಯ ನಡೆಸಿದ್ದು ಪೊಲೀಸರೇ ಆದರೂ, ಅಂಥ ಪೊಲೀಸರು ಕೊಲೆ ಆರೋಪಿಗಳಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಬೇಕು.
ಭ್ರಷ್ಟರೂ, ದುಷ್ಟರೂ, ಕ್ರಿಮಿನಲ್ ಮನಸ್ಥಿತಿಯ ರಕ್ತ ಪಿಪಾಸು ರಾಜಕಾರಣಿಗಳೂ ಹಾಗೂ ಪೊಲೀಸ್ ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿಯ ಕಾರಣಕ್ಕೆ, ” ಅನಿವಾರ್ಯ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಪೊಲೀಸರಿಗೆ ಇರುವ ಒಂದು ಕಾನೂನಿನ ರಕ್ಷಣೆ”ಯನ್ನು ತಮಗಾಗದವರನ್ನು ಕೊಲ್ಲಲು ದುರ್ಬಳಕೆ ಮಾಡುತ್ತಿರುವುದು ನಡೆಯುತ್ತಲೇಬಂದಿದೆ. ಇದು ಅತ್ಯಂತ ಖಂಡನೀಯ ಮತ್ತು ಎಷ್ಟು ಮಾತ್ರಕ್ಕೂ ಸಮರ್ಥನೀಯವಲ್ಲ.
ನ್ಯಾಯ ತೀರ್ಮಾನಿಸುವ ಪರಮೋಚ್ಛ ವ್ಯವಸ್ಥೆಯಾದ ನ್ಯಾಯಾಂಗದಲ್ಲಿ ಆಸೀನರಾಗಿರುವ ನ್ಯಾಯವೇತ್ತರು ಪ್ರಜಾತಾಂತ್ರಿಕ ವ್ಯವಸ್ಥೆಯ ಪರಮೋನ್ನತ ಆಶಯವನ್ನು ಈಡೇರಿಸಲು ಕಂಕಣಬದ್ಧವರಾಗಿದ್ದರೆ, ಆಗ ಈ “ಪೂರ್ವ ನಿರ್ಧರಿತ” , “ಸಂಚಿನ ಕೊಲೆ” ನಡೆಸಿದ ಪೋಲೀಸ್ ಅಧಿಕಾರಿಗಳು ಖಂಡಿತವಾಗಿಯೂ ಜೀವಾವಧಿ ಶಿಕ್ಷೆಗೆ ಒಳಗಾಗುತ್ತಾರೆ.
~ ಶ್ರೀರಾಮ ದಿವಾಣ