ಮಲ್ಪೆ: ಜುಲೈ 30(ಹಾಯ್ ಉಡುಪಿ ನ್ಯೂಸ್) ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಎಂದು ಆರೋಪಿಸಿ ರಾತ್ರಿ ಮನೆಗೆ ನುಗ್ಗಿ ವ್ಯಕ್ತಿ ಯೋರ್ವರಿಗೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಹೂಡೆ ,ಹರ್ಷ ನಿಲಯ , ನಿವಾಸಿ, ಹರ್ಷವರ್ಧನ್ (42) ಇವರು ದಿನಾಂಕ; 29.07.2022 ರಂದು ರಾತ್ರಿ 9.40 ಗಂಟೆಗೆ ಮನೆಯಲ್ಲಿ ಇರುವಾಗ ಪ್ರಶಾಂತ್ ಕಾಂಚನ್ ಎಂಬವನು ಹರ್ಷವರ್ಧನ್ ರಿಗೆ ಪೋನ್ ಮಾಡಿ ನೀನು ನಿನ್ನ ಸ್ನೇಹಿತರ ಕುಮ್ಮಕ್ಕಿನಿಂದ ನಮ್ಮ ನಾಯಕರ ವಿರುದ್ದ ಬಾರಿ ಅವಹೇಳನಕಾರಿ ಪೋಸ್ಟ್ ಹಾಕುತ್ತೀಯಾ ಎಂದು ಬೈದು ಈಗ ನೀನು ಎಲ್ಲಿದ್ದಿಯಾ ಎಂದು ಕೇಳಿದಕ್ಕೆ ಹರ್ಷವರ್ಧನ್ ನಾನು ಮನೆಯಲ್ಲಿ ಇರುವುದಾಗಿ ತಿಳಿಸಿದ್ದು ಪ್ರಶಾಂತ್ ಕಾಂಚನ್ ಮತ್ತು ರೋಶನ್ ರವರು ಹರ್ಷವರ್ಧನ್ ರ ಮನೆಗೆ ರಾತ್ರಿ 10.00 ಗಂಟೆಗೆ ಬಂದು ಹರ್ಷವರ್ಧನ್ ರನ್ನು ಕರೆದು ಮನೆ ಒಳಗೆ ಅಕ್ರಮ ಪ್ರವೇಶಮಾಡಿ ಈರ್ವರೂ ಹರ್ಷವರ್ಧನ್ ರಿಗೆ ನೀನು ನಮ್ಮ ನಾಯಕರ ವಿರುದ್ದ ಬಾರಿ ಅವಹೇಳನಕಾರಿ ಪೋಸ್ಟ್ ಹಾಕುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹರ್ಷವರ್ಧನ್ ರ ಕೆನ್ನೆಗೆ , ಎದೆಗೆ ಹೊಡೆದು ಕಾಲಿನಿಂದ ತುಳಿದು ಕಬ್ಬಿಣದ ರಾಡ್ ತೋರಿಸಿ ಹರ್ಷವರ್ಧನ್ ರಿಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರು ನೀಡಿದ್ದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.