Spread the love

ಮಣಿಪಾಲ: ಜುಲೈ 30 ( ಹಾಯ್ ಉಡುಪಿ ನ್ಯೂಸ್) ಮಣಿಪಾಲದ ವಿದ್ಯಾಸಂಸ್ಥೆಯಲ್ಲಿ ಫಾರ್ಮಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ರವೀಂದ್ರನಾಥ ಟ್ಯಾಗೋರ್‌ ಹಾಸ್ಟೇಲ್‌ನ ರೂಂ ನಂಬ್ರ 326 ರಲ್ಲಿ ತಂಗಿರುವ ಮಣಿಪಾಲದಲ್ಲಿ ಫಾರ್ಮಸಿ ವ್ಯಾಸಂಗ ಮಾಡಿಕೊಂಡಿರುವ ವಿದ್ಯಾರ್ಥಿ ಅಭಯ್‌ ಕುಮಾರ್ ಪ್ರಾಯ: 26 ವರ್ಷ ಈತನು ದಿನಾಂಕ: 27.07.2022 ರಂದು ರಾತ್ರಿ 9:30 ಗಂಟೆಗೆ ಹಾಸ್ಟೇಲ್‌ನಿಂದ ಹೊರಗಡೆ ಹೋದವನು ಇದುವರೆಗೂ ವಾಪಾಸ್‌ ಹಾಸ್ಟೇಲ್‌ಗೂ ಬಾರದೇ ಇದ್ದು ಕಾಣೆಯಾದ ಅಭಯ್‌ ಕುಮಾರ್‌ನ ಪಾಲಕರನ್ನು  ಸಂಪರ್ಕಿಸಿದಾಗ ಆತ ಮನೆಗೆ ಕೂಡ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ.  ಆತನನ್ನು ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ಮಾಹೆ ಮಣಿಪಾಲ ಹಾಸ್ಟೇಲ್ ನ ಚೀಫ್ ವಾರ್ಡನ್ ಡಾ.ಹೆಚ್.ಕೆ. ಧೀಮಾನ್ ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!