ಕೋಟ: ಜುಲೈ 20 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದವರನ್ನು ಕೋಟ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ದಿನಾಂಕ 19/07/2022 ರಂದು ಕೋಟ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಮಧು ಬಿ.ಇ ಇವರಿಗೆ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದ 1) ನರಸಿಂಹ (51), ವಾಸ: ಸಿದ್ದಿ ಕೃಪಾ ಬೇಳೂರು ಕ್ರಾಸ್ ಉಳ್ತೂರು ಕುಂದಾಪುರ ತಾಲೂಕು, 2) ಬಾಬು ಪೂಜಾರಿ (53), ವಾಸ: ಸಾನಿಧ್ಯ ನಿಲಯ ಕೊಮೆ ರಸ್ತೆ ತೆಕ್ಕಟ್ಟೆ ಗ್ರಾಮ ಎಂಬ ಈರ್ವರನ್ನು ಹಿಡಿದು ಬಂಧಿಸಿ ಅವರ ಬಳಿ ಇದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ 3,150/- ರೂಪಾಯಿ, ಮಟ್ಕಾ ಚೀಟಿ, ಬಾಲ್ ಪೆನ್ ನ್ನು ಸ್ವಾಧೀನಪಡಿಸಿಕೊಂಡಿದ್ದು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.