ಮಲ್ಪೆ: ಕನ್ನಿಪಾರ್ಟಿ ಮಲ್ಪೆ ಇವರ ಮಹಾಸಭೆಯು ದಿನಾಂಕ 17-07-2022 ರಂದು ಮಲ್ಪೆ ಯಲ್ಲಿ ನಡೆಯಿತು.
ಮಲ್ಪೆ ಕನ್ನಿಪಾರ್ಟಿಯವರ ಮಹಾಸಭೆಯು ಶ್ರೀ ಜಯಕರ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯಲ್ಲಿ ಮಲ್ಪೆಯ ಸಮಾಜ ಸೇವಕ ಸತೀಶ್ ಕುಂದರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
ಮಲ್ಪೆ ಸುತ್ತ ಮುತ್ತಲಿನ ಪರಿಸರದಲ್ಲಿ ಸಮಾಜ ಸೇವಕರಾಗಿ ಗುರುತಿಸಲ್ಪಟ್ಟಿರುವ ಸತೀಶ್ ಕುಂದರ್ ರವರು ಅಪಘಾತ ಅಥವಾ ಇನ್ಯಾವುದೋ ತುರ್ತು ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಆಪಧ್ಬಾಂಧವನಾಗಿ ಬಂದು ಗಾಯಾಳುಗಳನ್ನು ತನ್ನದೇ ಖರ್ಚಿನಲ್ಲಿ ಆಸ್ಪತ್ರೆಯವರೆಗೆ ಸಾಗಿಸಿ ತುರ್ತು ಚಿಕಿತ್ಸೆಯ ಆಸ್ಪತ್ರೆಯ ಬಿಲ್ಲನ್ನು ಹಣವಿಲ್ಲದವರಿಗೆ ತಾನೇ ಪಾವತಿಸಿ ಮಾನವೀಯತೆ ಮೆರೆಯುವ ಓರ್ವ ಆದರ್ಶ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದಾರೆ.
ಇದುವರೆಗೆ ಸುಮಾರು 400 ಕ್ಕೂ ಮಿಕ್ಕಿ ಶವಗಳ ಅಂತ್ಯ ಸಂಸ್ಕಾರದಲ್ಲಿ ಓರ್ವ ಮುಂದಾಳಾಗಿ ನಿಂತು ಶವಗಳು ಯಾವುದೇ ರೋಗಿಯದ್ದಾಗಿರಲಿ,ಶವಗಳು ಕೊಳೆತಿರಲಿ ಅಥವಾ ಯಾರೂ ಮುಟ್ಟದೆ ಇರುವಂತಹ ಸ್ಥಿತಿ ಇದ್ದರೂ ಕೂಡ ಸತೀಶ್ ಕುಂದರ್ ರವರು ಅಂತಹ ಶವಗಳನ್ನು ಕೂಡ ತಾನೇ ಸ್ನಾನ ಮಾಡಿಸಿ ಅಲಂಕರಿಸಿ ಶವ ಸಂಸ್ಕಾರಕ್ಕೆ ಅಣಿಗೊಳಿಸುತ್ತಾರೆ. ಶವ ಸಂಸ್ಕಾರದ ವಿಧಿ, ವಿಧಾನಗಳನ್ನು ಧಾರ್ಮಿಕ ವಿಧಿ ವಿಧಾನಗಳಂತೆ ಮಾಡಿ ಓರ್ವ ಗುರಿಕಾರ ನಂತೆ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿ ಶವಸಂಸ್ಕಾರದ ಧಾರ್ಮಿಕ ಕಾರ್ಯಕ್ರಮವನ್ನು ಸತ್ತ ವ್ಯಕ್ತಿಯ ಮನೆಯಿಂದ ರುದ್ರ ಭೂಮಿಯವರೆಗೂ ಯಾವುದೇ ಫಲಾಪೇಕ್ಷೆ ಇಲ್ಲದೆ ಸತೀಶ್ ಕುಂದರ್ ಮಲ್ಪೆ ನೆರವೇರಿಸಿ ಕೊಡುವುದು ಅವರ ವಿಶೇಷ ತೆಯಾಗಿದೆ.
ಸತೀಶ್ ಕುಂದರ್ ಮಲ್ಪೆ ಇವರ ಈ ಸಮಾಜ ಸೇವೆ ಯನ್ನು ಗುರುತಿಸಿ ಕನ್ನಿ ಪಾರ್ಟಿ ಮಲ್ಪೆ ಇವರು ಸನ್ಮಾನಿಸಿರುತ್ತಾರೆ.