ಕಾಪು: ಜುಲೈ 20 (ಹಾಯ್ ಉಡುಪಿ ನ್ಯೂಸ್) ಏಣಗುಡ್ಡೆ ಪರಿಸರದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಪೋಲಿಸರು ಬಂಧಿಸಿದ್ದಾರೆ.
ಶ್ರೀಶೈಲ ಡಿ. ಮುರಗೋಡ ಪಿಎಸ್‌ಐ(ಕಾ & ಸು) ಕಾಪು ಪೊಲೀಸ್ ಠಾಣೆ ರವರು ದಿನಾಂಕ 18.07.2022 ರಂದು ಸಮಯ ಬೆಳಗ್ಗೆ 11:00 ಗಂಟೆಗೆ ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖೆಯ ಜೀಪಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಹತ್ತಿರ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಿಸಿದಾಗ ಆತನ ಹೆಸರು ಅಶ್ಲೇಷ್ ಎ . ಕೋಟ್ಯಾನ್ ಎಂದು ತಿಳಿಸಿದ್ದು ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್, ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿಸಿದ್ದು, ಅದರಂತೆ ಪರೀಕ್ಷಿಸಿದ ವೈದ್ಯರು ದಿನಾಂಕ 19.07.2022 ರಂದು ಅಶ್ಲೇಷ್ ಎ. ಕೋಟ್ಯಾನ್ ಎಂಬಾತನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಗಾಂಜಾ ಸೇವನೆ ಮಾಡಿರುವ ಆರೋಪದ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.