Spread the love


ಬಿಲ್ಲವರ ಸೇವಾ ಸಂಘ ಉಡುಪಿ.(ರಿ) ಬನ್ನಂಜೆ ಹಾಗೂ ನಾರಾಯಣ ಗುರು ವಿದ್ಯಾನಿಧಿ ವತಿಯಿಂದ ರೂಪಾಯಿ 4.5 ಲಕ್ಷ ವೆಚ್ಚದಲ್ಲಿ ಸಮಾಜದ ಪ್ರಥಮ,ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 380 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. 90%ಕ್ಕಿಂತ ಮೇಲ್ಪಟ್ಟು ಅಂಕ ಪಡೆದಿರುವ 31 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ ಕಿದಿಯೂರು ವಹಿಸಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡಿದರು, ಉಪಾಧ್ಯಕ್ಷರಾದ ಸೂರ್ಯಪ್ರಕಾಶ್ ರವರು ಪ್ರಸ್ತಾವನೆ ಗೈದರು. ಮುಖ್ಯ ಅತಿಥಿಗಳಾದ ಮಂಜುನಾಥ್ ಸನ್ ಪೊಲೀಸ್ ಇನ್ಸ್ಪೆಕ್ಟರ್ ಉಡುಪಿ, ಚಂದ್ರಶೇಖರ್ ವಿ ಸುವರ್ಣ ವ್ಯವಸ್ಥಾಪಕರು ಬಾಳಿಗ ಗ್ರೂಪ್ ಆಫ್ ಕಂಪನಿ ಉಡುಪಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ವೇದಿಕೆಯಲ್ಲಿ ಸಂಘದ ಮಾಜಿ ಉಪಾಧ್ಯಕ್ಷ ರಾಮಚಂದ್ರ ಕಿದಿಯೂರು, ಪಿ.ಕೆ. ಶಂಕರ್, ಜನಾರ್ಧನ. ಸಿ. ಕರ್ಕೇರ, ಶೇಖರ ಕಲ್ಮಾಡಿ, ನಾರಾಯಣ ಜತ್ತನ್, ಮಧುಸೂದನ್, ಶಶಿಧರ್ .ಎಂ. ಅಮೀನ್, ಉದಯ ಪೂಜಾರಿ, ರಾಘವೇಂದ್ರ ಅಮೀನ್, ಗೋಪಾಲ ಪೂಜಾರಿ, ಅಶೋಕ ಪೂಜಾರಿ, ಸದಾನಂದ ಅಮೀನ್, ಶ್ರೀಮತಿ ರೇಖಾ ಭಾಸ್ಕರ್, ವಿದ್ಯಾನಿಧಿ ಸಂಚಾಲಕರಾದ, ಕೃಷ್ಣಪ್ಪ ಅಂಚನ್ ನಯ್ಯಂಪಳ್ಳಿ ಡಾ|| ಸಂದೀಪ್. ಜೆ. ಸನಿಲ್, ಎಸ್.ಟಿ. ಕುಂದರ್, ಗಣೇಶ್ ಕೋಟ್ಯಾನ್ ಗುಂಡಿಬೈಲು, ಸದಾನಂದ ಪೂಜಾರಿ ಬನ್ನಂಜೆ, ವಿದ್ಯಾನಿಧಿ ದಾನಿ ಆನಂದ. ಎಂ. ಪೂಜಾರಿ ಬೈಲೂರು, ನಾರಾಯಣ ಗುರು ಕಲ್ಯಾಣ ಮಂಟಪ ನವೀಕರಣ ಸಮಿತಿ ಸದಸ್ಯರಾದ, ಜಿತೇಶ್ ಕುಮಾರ್, ಪ್ರಕಾಶ್. ಜಿ. ಕೊಡವೂರು, ಮೊದಲಾದವರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಪುರೋಹಿತರಾದ ದಯಾಕರಶಾಂತಿ ಪ್ರಾರ್ಥನೆಗೈದರು ಕಾರ್ಯದರ್ಶಿಯಾದ ಮಾಧವ ಬನ್ನಂಜೆ ಸ್ವಾಗತಿಸಿ ಧನ್ಯವಾದ ಗೈದರು

error: No Copying!