ಬ್ರಹ್ಮಾವರ: ಜುಲೈ ೧೭(ಹಾಯ್ ಉಡುಪಿ ನ್ಯೂಸ್) ಕ್ರಷಿ ಯಂತ್ರಗಳನ್ನು ದುರಸ್ಥಿ ಮಾಡಿ ಕೊಡುವುದಾಗಿ ನಂಬಿಸಿ ಕೊಂಡೊಯ್ದು ವಾಪಾಸು ನೀಡದೆ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಬ್ರಹ್ಮಾವರ ,ನೀಲಾವರ ಗ್ರಾಮದ ,ಕಳುವಿನ ಬೆಟ್ಟು ನಿವಾಸಿ ಮಹೇಂದ್ರ ಕುಮಾರ್ (೪೦) ಇವರು ಕೇದೋರೊತ್ಥಾನ ಟ್ರಸ್ಟ್ (ರಿ.) ಉಡುಪಿ ಇದರ ಸದಸ್ಯರಾಗಿರುತ್ತಾರೆ, ಅವರು 2021-22 ನೇ ಸಾಲಿನಲ್ಲಿ ಹಡಿಲು ಭೂಮಿ ಕೃಷಿ ಯೋಜನೆಯಡಿ ರೂಪಾಯಿ 12 ಲಕ್ಷ ಮೌಲ್ಯದ 4 ಭತ್ತ ನಾಟಿ ಯಂತ್ರಗಳನ್ನು ಖರೀದಿಸಿ, ಈ ವರ್ಷದ ನಾಟಿ ಪ್ರಾರಂಭವಾಗುವ ಮುಂಚೆ ಯಂತ್ರಗಳನ್ನು ದುರಸ್ಥಿ ಮಾಡುವ ಸಲುವಾಗಿ ಬ್ರಹ್ಮಾವರ ಕೃಷಿಕೇಂದ್ರದ ವಠಾರದಲ್ಲಿ ಇಟ್ಟಿರುತ್ತಾರೆ. ಎಪ್ರಿಲ್ ತಿಂಗಳಲ್ಲಿ ಈ 4 ಯಂತ್ರಗಳನ್ನು ಶ್ರೀಕಾಂತ್ ಭಟ್ ರಿಪೇರಿ ಮಾಡುವ ನೆಪದಲ್ಲಿ ತೆಗೆದುಕೊಂಡು ಹೋಗಿದ್ದು, ಮಹೇಂದ್ರ ಕುಮಾರ್ ಇವರು ಈ ತಿಂಗಳಲ್ಲಿ ನಾಟಿ ಮಾಡುವ ಸಂಧರ್ಭದಲ್ಲಿ ಆ ಯಂತ್ರಗಳನ್ನು ಹಲವು ಬಾರಿ ಕೇಳಿದಾಗ ಆರೋಪಿ ಶ್ರೀಕಾಂತ್ ಭಟ್, [ ಮಾಲಕರು, ಜೀವನ್ ಯಂತ್ರ ಕೊಟೇಶ್ವರ ಇವರು ಇದುವರೆಗೂ ಯಂತ್ರಗಳನ್ನು ವಾಪಾಸ್ಸು ನೀಡದೆ ಮಹೇಂದ್ರ ಕುಮಾರ್ ಇವರಿಗೆ ಮೋಸ ಮಾಡಿರುತ್ತಾರೆ ಎಂದು ದೂರು ದಾಖಲಿಸಿದ್ದಾರೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.