ಕುಂದಾಪುರ: ಜುಲೈ ೧೬೮±೮(ಹಾಯ್ ಉಡುಪಿ ನ್ಯೂಸ್) ಮನೆಯಲ್ಲಿ ಯಾರೂ ಇಲ್ಲದ ಸಮಯ ಸಂಬಂಧಿಕಳು ಮಾಂಗಲ್ಯ ಸರ ಕಳ್ಳತನ ನಡೆಸಿದ್ದಾಳೆ ಎಂದು ಆರೋಪಿಸಿ ಶರಾವತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು ,ಕಾಳಾವರ ಗ್ರಾಮದ,ಸಳ್ವಾಡಿ ನಿವಾಸಿ ಶರಾವತಿ ಇವರು ತನ್ನ ಮಾಂಗಲ್ಯ ಸರವನ್ನು ಮನೆಯ ಕಪಾಟಿನ ಲಾಕರ್ ಕೀ ಸರಿ ಇಲ್ಲದಿರುವುದರಿಂದ ಮಲಗುವ ಮಂಚದ ಬೆಡ್‌ನ ಕೆಳಗಡೆ ಒಂದು ಪರ್ಸ್‌ನಲ್ಲಿ ಹಾಕಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿ ಇಟ್ಟಿದ್ದು ದಿನಾಂಕ 15/05/2022 ರಂದು ಪಿರ್ಯಾದಿದಾರರು ಗಂಡನೊಂದಿಗೆ ಕುಂದಾಪುರಕ್ಕೆ ಹೋಗುವ ಬಗ್ಗೆ ಚಿನ್ನವನ್ನು ಹಾಕಿಕೊಳ್ಳಲು ಮಂಚದ ಬೆಡ್‌ನ ಕೆಳಗಡೆ ಇರುವ ಪರ್ಸ್‌ನ್ನು ನೋಡಿದಾಗ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಪರ್ಸ್ ಇಲ್ಲದೇ ಇರುವುದು ಕಂಡು ಬಂದಿರುತ್ತದೆ ಎಂದು ದೂರಿದ್ದಾರೆ.
ದಿನಾಂಕ 04/05/2022 ರಂದು ಶರಾವತಿ ಅವರ ಮಾವನ ಮಗಳಾದ ಅನಿತಾಳು ಶರಾವತಿ ಯವರ ಮನೆಗೆ ಬಂದು ಸಂಬಂಧಿಕರ ಮದುವೆಗೆ ಹೋಗಲು ಶರಾವತಿಯವರ ಬಳಿ ಚಿನ್ನವನ್ನು ಕೇಳಿದ್ದು ಆಗ ಶರಾವತಿಯವರು ಮಲಗುವ ಮಂಚದ ಬೆಡ್‌ನ ಕೆಳಗಡೆ ಒಂದು ಪರ್ಸ್‌ನಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿ ಇಟ್ಟಿದ್ದ ಚಿನ್ನದ ಕಿವಿಯ ಜುಮುಕಿ ಮತ್ತು ಕಿವಿಯ ಜುಮುಕಿ ಚೈನ್ ತೆಗೆದು ಕೊಟ್ಟಿದ್ದನ್ನು ಅನಿತಾಳು ತೆಗೆದುಕೊಂಡು ಹೋಗಿರುತ್ತಾಳೆ. ನಂತರ ಅನಿತಾಳು ದಿನಾಂಕ:06/05/2022 ರಂದು ವಾಪಾಸು ತಂದು ಕೊಟ್ಟಿರುತ್ತಾಳೆ. ಶರಾವತಿಯವರು ಚಿನ್ನವನ್ನು ಇಟ್ಟ ಸ್ಥಳವನ್ನು ಅನಿತಾ ರವರು ನೋಡಿದ್ದು ಆಕೆಯೆ ಶರಾವತಿಯವರು ಮನೆಯಲ್ಲಿ ಇಲ್ಲದ ಸಮಯ ಶರಾವತಿಯವರ ಮನೆಗೆ ಬಂದು ಮಾಂಗಲ್ಯ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾಳೆ ಎಂದು ದೂರಿಕೊಂಡಿದ್ದಾರೆ . ಮಾಂಗಲ್ಯ ಸರದ ತೂಕ 20 ಗ್ರಾಂ ಆಗಿದ್ದು ಅದರ ಮೌಲ್ಯ 80,000/- ರೂಪಾಯಿ ಆಗಿರುತ್ತದೆ ಎಂದು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ