ಉಡುಪಿ: ಜುಲೈ ೧೬( ಹಾಯ್ ಉಡುಪಿ ನ್ಯೂಸ್) ಅಪರಿಚಿತ ವ್ಯಕ್ತಿ ಆನ್ಲೈನ್ ಮೂಲಕ ತನ್ನ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿ ವಂಚನೆ ಮಾಡಿರುವ ಬಗ್ಗೆ ವ್ಯಕ್ತಿಯೋರ್ವರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಸಂತ ಶೆಟ್ಟಿ, ಇವರು ಕೆನರಾ ಬ್ಯಾಂಕ್, ಬ್ರಹ್ಮಾವರ ಶಾಖೆ ಇಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಅದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಂಬ್ರ ಹೊಂದಿರುತ್ತಾರೆ. ದಿನಾಂಕ 13.07.2022 ರಂದು ಆನ್ಲೈನ್ ಮೂಲಕ ಖರೀದಿಸಿದ್ದ ಶೂವ ನ್ನು ಹಿಂತಿರುಗಿಸುವ ಬಗ್ಗೆ ಕರೆ ಮಾಡಿದಾಗ ನಿಮ್ಮ ಶೂ ಹಣವನ್ನು ಹಿಂತಿರುಗಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ಒದಗಿಸುವಂತೆ ಸೂಚಿಸಿದ ಮೇರೆಗೆ ವಸಂತ ಶೆಟ್ಟಿ ಯವರು ಕ್ರೆಡಿಟ್ ಕಾರ್ಡ್ ವಿವರ ಒದಗಿಸಿದ್ದು, ಆ ಬಳಿಕ ಅವರ ಕ್ರೆಡಿಟ್ ಕಾರ್ಡ್ ನಿಂದ ಅದೇ ದಿನ ರೂ. 20,290/-, ರೂ. 15,217/- ಹಾಗೂ ರೂ. 3,554/- ಒಟ್ಟು ರೂ. 39,061/- ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ವಸಂತ ಶೆಟ್ಟಿ ಯವರ ಗಮನಕ್ಕೆ ಬಾರದೇ ಅನಧೀಕೃತವಾಗಿ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ಮೋಸ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.