Spread the love

ಬೈಂದೂರು: ಜುಲೈ ೧೪(ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವರನ್ನು ಕಾರಿನಲ್ಲಿ ಕೊಲೆ ಮಾಡಿ ಸಂಶಯ ಬಾರದಂತೆ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷಿ ನಾಶ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಬೈಂದೂರು ತಾಲೂಕು,ಪಡುವರಿ ಗ್ರಾಮ,ಹಾಡಿ ಮನೆ ನಿವಾಸಿ ಪ್ರಕಾಶ್ ದೇವಾಡಿಗ (೩೩)ಎಂಬವರು ದಿನಾಂಕ 12/07/2022 ರಂದು ತಮ್ಮ ಬಾಡಿಗೆ ಕಾರಿನಲ್ಲಿ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹೋಗಿ, ರಾತ್ರಿ 10:30 ಗಂಟೆಗೆ ಬಾಡಿಗೆ ಮುಗಿಸಿ ಮನೆಗೆ ಬಂದಿದ್ದು, ದಿನಾಂಕ 13/07/2022 ರಂದು ಬೆಳಿಗ್ಗೆ 7:30 ಗಂಟೆಗೆ ಅವರ ಕಾರಿನಲ್ಲಿ ಬಾಡಿಗೆಯ ಬಗ್ಗೆ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿರುವಾಗ ಪಡುವರಿ ಗ್ರಾಮದ ಹೇನ್ ಬೇರು ಶಾಲೆ ರಸ್ತೆಯ ರಾಮಕೃಷ್ಣ ದೇವಾಡಿಗರವರ ಜಾಗದ ಬಳಿ ಅರಣ್ಯ ಇಲಾಖೆಯ ಜಾಗದ ರಸ್ತೆಯ ಎಡಭಾಗದಲ್ಲಿ ಒಂದು ಕಾರು ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಪ್ರಕಾಶ್ ದೇವಾಡಿಗರು ಅವರ ಸ್ನೇಹಿತನೊಂದಿಗೆ ಹೋಗಿ ಕಾರನ್ನು ನೋಡಿದಾಗ Ford ಕಂಪೆನಿಯ Ikon ಕಾರಾಗಿದ್ದು, ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಕಾರಿನ ಹಿಂಬದಿಯ ಸೀಟಿನ ಬಲಭಾಗದಲ್ಲಿ ಒಂದು ಅಪರಿಚಿತ ವ್ಯಕ್ತಿಯ ಮೃತಶರೀರ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕಾರಿನ ಎಲ್ಲಾ ಡೋರ್ ಗಳು ಲಾಕ್ ಆಗಿದ್ದು, ಕಾರಿನ ಕೀ ಕಂಡು ಬಂದಿರುವುದಿಲ್ಲ. ಕಾರಿನ ಸ್ವಲ್ಪ ದೂರದಲ್ಲಿ ಪೆಟ್ರೋಲ್ ವಾಸನೆ ಬರುವ 2 ಲೀಟರ್ ನ ಪ್ಲಾಸ್ಟಿಕ್ ಬಾಟಲಿ ಬಿದ್ದು ಕೊಂಡಿರುತ್ತದೆ.  ದಿನಾಂಕ 12/07/2022ರ ರಾತ್ರಿ 10:30 ಗಂಟೆಯಿಂದ ದಿನಾಂಕ 13/07/2022ರ ಬೆಳಿಗ್ಗೆ 7:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ವ್ಯಕ್ತಿಗಳು ಯಾರನ್ನೋ ಕೊಲೆ ಮಾಡಿ, ಕಾರಿನಲ್ಲಿ ಹಾಕಿ, ನಿರ್ಜನ ಪ್ರದೇಶದಲ್ಲಿ ಕಾರನ್ನು ಇರಿಸಿ, ಕಾರಿನ ಎಲ್ಲಾ ಡೋರ್ ಗಳನ್ನು ಲಾಕ್ ಮಾಡಿ, ಕಾರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಸುಟ್ಟು ಹಾಕಿರುತ್ತಾರೆ ಎಂದು ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

error: No Copying!