ಉಡುಪಿ: ಜುಲೈ ೧೩(ಹಾಯ್ ಉಡುಪಿ ನ್ಯೂಸ್) ವಿದ್ಯಾರ್ಥಿ ನಿಯರೀರ್ವರು ಅತಿಯಾದ ಮದ್ಯಪಾನ ಮಾಡಿ ಅಮಲಿನಲ್ಲಿ ಬಸ್ಸಿನಲ್ಲೇ ಅಮಲೇರಿ ಮಲಗಿದ ಘಟನೆ ರಾತ್ರಿ ನಡೆದಿದೆ.
ಮಣಿಪಾಲದ ಪಬ್ ಒಂದರಲ್ಲಿ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ತಮ್ಮ ಪಿ.ಜಿ.ಗೆ ತೆರಳಲು ಮಣಿಪಾಲದ ಬಸ್ಸು ನಿಲ್ದಾಣದಿಂದ ಉಡುಪಿಯ ಕಡೆ ಹೊರಡುವ ರಾತ್ರಿಯ ಕೊನೆಯ ಬಸ್ ಏರಿದ ಈರ್ವರು ವಿದ್ಯಾರ್ಥಿನಿಯರು ಬಸ್ಸಿನಲ್ಲೇ ಅಮಲೇರಿ ಅರೆ ಪ್ರಜ್ನಾವಸ್ಥೆಯಲ್ಲಿ ಚೋಚ ಮಾಡಿದ್ದಾರೆ ಎನ್ನಲಾಗಿದೆ.
ಉಡುಪಿಗೆ ಬಂದ ಸಿಟಿ ಬಸ್ಸಿನ ನಿರ್ವಾಹಕರು ಈರ್ವರು ವಿದ್ಯಾರ್ಥಿನಿಯರು ಮಲಗಿರುವುದನ್ನು ಕಂಡು ಎಬ್ಬಿಸಿದಾಗ ಈರ್ವರೂ ಅಮಲಿನಲ್ಲಿ ಏನೇನೋ ಗೊಣಗ ತೊಡಗಿದ್ದು . ಅಮಲಿನಲ್ಲಿ ಬಸ್ಸಿನಲ್ಲೇ ಮಲಗಿದ ಸ್ಥಿತಿಯಲ್ಲಿ ಅರೆಪ್ರಜ್ನಾವಸ್ಥೆಯಲ್ಲಿ ಮಲಗಿದ್ದಾರೆ ಎನ್ನಲಾಗಿದೆ.
ಬಸ್ಸಿನ ನಿರ್ವಾಹಕರು ಪೊಲೀಸ್ ರಿಗೆ ಕರೆ ಮಾಡಿದ್ದು ಪೋಲಿಸರು ಬಂದು ವಿದ್ಯಾರ್ಥಿ ನಿಯರ ಸ್ಥಿತಿ ಕಂಡು 108 ಆಂಬುಲೆನ್ಸ್ ಗೆ ಕರೆ ಮಾಡಿ ಕರೆಸಿ ಆಂಬ್ಯುಲೆನ್ಸ್ ಮೂಲಕ ಈರ್ವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿದ್ಯಾರ್ಥಿನಿಯರು ಪಬ್ ನಲ್ಲಿ ಗಾಂಜಾ ಸೇವಿಸಿದ್ದಾರೋ ಏನು ಎಂದು ವ್ಯೆದ್ಯಕೀಯ ಪರೀಕ್ಷೆ ಯ ಮೂಲಕ ಇನ್ನಷ್ಟೇ ತಿಳಿಯಬೇಕಿದೆ.