ಬ್ರಹ್ಮಾವರ: ಜುಲೈ 12(ಹಾಯ್ ಉಡುಪಿ ನ್ಯೂಸ್) ಮನೆ ಯವರು ಸಂಬಂಧಿಕರ ಗ್ರಹಪ್ರವೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆ ಕಳ್ಳತನ ನಡೆಸಿದ ಘಟನೆ ನಡೆದಿದೆ.
ಟ್ರೀಶಾ ಡಿಸೋಜಾ (20), ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮದ ಗೊಳಿಕಟ್ಟೆ ಎಂಬಲ್ಲಿರುವ ಟ್ರಿನಿಟಿ ಹೌಸ್ ನಲ್ಲಿ ವಾಸವಾಗಿದ್ದು ಇವರು ಹಾಗೂ ಅವರ ತಾಯಿ ಮನೆಗೆ ಬೀಗ ಹಾಕಿ ಪೇತ್ರಿಯಲ್ಲಿರುವ ಅವರ ಅಜ್ಜಿ ಮನೆಯ ಗೃಹ ಪ್ರವೇಶಕ್ಕೆ ಹೋದ ಸಮಯ ದಿನಾಂಕ 08.07.2022 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 12.07.2022ಬೆಳಿಗ್ಗೆ 07:50 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಎದುರು ಬಾಗಿಲನ್ನು ಕಬ್ಬಿಣದ ಸಲಕೆಯಿಂದ ಒಡೆದು ಮನೆಯ ಒಳಗೆ ಹೋಗಿ ಎರಡೂ ಬೆಡ್ ರೂಮ್, ಅಡುಗೆ ಕೋಣೆ , ಹಾಲ್‌ನ ಸೆಲ್ಪನ್ನು ಜಾಲಾಡಿ , ಬೆಡ್ ರೂಮ್‌ನ ಲೋಕರನ್ನು ಒಡೆದು, ತೆರೆದು ಅದರೊಳಗಿದ್ದ 2 ಚಿನ್ನದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಉಂಗುರವು 15 ಗ್ರಾಮ್ ಆಗಿದ್ದು ಅಂದಾಜು ಮೌಲ್ಯ ಸುಮಾರು ರೂ. 60,000/- ಆಗಿರುತ್ತದೆ ಎಂದು ದೂರು ನೀಡಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.