Spread the love

ಕುಂದಾಪುರ: ಜುಲೈ ೧೨ (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದವನನ್ನು ಪೊಲೀಸರು ಬಂಧಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸದಾಶಿವ ಆರ್ ಗವರೋಜಿರವರಿಗೆ ದಿನಾಂಕ 11-07-2022ರಂದು ಕುಂದಾಪುರ ತಾಲೂಕು ಕಸಬ ಗ್ರಾಮ ವ್ಯಾಪ್ತಿಯ ಶಾಸ್ತ್ರೀ ವೃತ್ತದ ಬಳಿ ಫ್ಲೈ ಓವರ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ  ಬಂದ ಮಾಹಿತಿಯಂತೆ ಕೂಡಲೇ ದಾಳಿ ಮಾಡಿ ಮಟ್ಕಾ ಬರೆಯುತ್ತಿದ್ದ ಸುರೇಶ ದೇವಾಡಿಗ (48), ಮದ್ದುಗುಡ್ಡೆ ಹೊಸಕೇರಿ ಕುಂದಾಪುರ ಕಸಬಾ ಗ್ರಾಮ  ಕುಂದಾಪುರ ತಾಲೂಕು ಉಡುಪಿ  ಜಿಲ್ಲೆ ಎಂಬಾತನನ್ನು ಬಂಧಿಸಿ,ಆತ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 500/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು  ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!