ಹಿರಿಯಡ್ಕ: ಉಡುಪಿ ತಾಲೂಕು, ಕುಕ್ಕೆಹಳ್ಳಿ ಗ್ರಾಮ , ಚೋಳಬೆಟ್ಟು ನಿವಾಸಿ ಮಹೇಶ್ ಹೆಬ್ಬಾರ್ (43),ಇವರು ಕುಕ್ಕೆಹಳ್ಳಿಯ ಅವರ ಸ್ವಂತ ಪಟ್ಟಾ ಜಾಗದ ಚೋಳಬೆಟ್ಟುವಿನ ಕೆರೆಯಲ್ಲಿ ಮೀನು ಸಾಕಣೆ ಮಾಡಿ ಮಾರಾಟ ಮಾಡಿಕೊಂಡಿದ್ದು, ಅದೇ ಊರಿನ ಸಂಜೀವ ನಾಯ್ಕ್ ಎಂಬುವವರು ಮಹೇಶ್ ಹೆಬ್ಬಾರರು ಮೀನು ಸಾಕಣೆ ಮಾಡದಂತೆ ಅವರಿಗೆ ಮೊದಲಿನಿಂದಲೂ ಕಿರುಕುಳ ನೀಡುತ್ತಾ ಬಂದಿದ್ದು, ದಿನಾಂಕ 10/07/2022 ರಂದು ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ಉಡುಪಿ ಮೀನುಗಾರಿಕಾ ಇಲಾಖೆಯ ವತಿಯಿಂದ ಮಹೇಶ್ ಹೆಬ್ಬಾರರ ಮೀನು ಸಾಕಣೆಯ ಕೆರೆಯ ಬಳಿ ಮಿಟೀಂಗ್ ನಡೆದಿದ್ದು, ಅದಕ್ಕೆ ಮೀನುಗಾರಿಕಾ ಇಲಾಖೆಯವರು ಹಾಗೂ ಮೀನು ಸಾಕಣೆ ಮಾಡುವವರು ಬಂದಿದ್ದು, 10:30 ಗಂಟೆಗೆ ಸಂಜೀವ ನಾಯ್ಕ್ ರವರು ಏಕಾಏಕಿ ಅವರ ಪಟ್ಟಾ ಜಾಗಕ್ಕೆ ಮೀಟಿಂಗ್ ನಡೆಯುವಲ್ಲಿಗೆ ಅಕ್ರಮ ಪ್ರವೇಶ ಮಾಡಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬಂದು ವಿಡಿಯೋ ಮಾಡಿದಂತೆ ಮಾಡಿ ಹೆಬ್ಬಾರರ ಬಳಿ ಬಂದು ಅವರಲ್ಲಿ ನೀನು ಇಲ್ಲಿ ಮೀನು ಸಾಕಣೆ ಮಾಡಿದರೆ ಜಾಗ್ರತೆ, ನನಗೆ 2,00,000/- ರೂಪಾಯಿಯನ್ನು ಕೊಟ್ಟರೆ ಮಾತ್ರ ನಿನಗೆ ಮಾಡಲು ಬಿಡುತ್ತೇನೆ ಎಂದು ಹೇಳಿ ಅವರಿಗೆ ಹೆದರಿಸಿ ಹೊಡೆಯಲು ಬಂದು ಗಲಾಟೆ ಮಾಡಿರುತ್ತಾನೆ. ಅಲ್ಲದೇ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಸಿದುಕೊಂಡು ಹೋಗುವ ಉದ್ದೇಶದಿಂದ ಹಿಡಿದು ಎಳೆದಿದ್ದು, ಆಗ ಅವರ ಚಿನ್ನದ ಸರ ತುಂಡಾಗಿ ಅಲ್ಲಿ ಎಲ್ಲಿಯೋ ಬಿದ್ದಿರುತ್ತದೆ. ಬಳಿಕ ಆತನು ಮಹೇಶ್ ಹೆಬ್ಬಾರರನ್ನು ಉದ್ದೇಶಿಸಿ ನಿನ್ನ ಮೇಲೆ ಜಾತಿ ನಿಂದನೆ ಕೇಸು ನೀಡುತ್ತೇನೆ ಎಂದು ಎಂದು ಜೀವ ಬೆದರಿಕೆ ಹಾಕಿ, ಬೆದರಿಸಿ ಹೋಗಿದ್ದಾನೆ ಎಂದು ಮಹೇಶ್ ಹೆಬ್ಬಾರ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಇದಕ್ಕೆ ಪ್ರತಿಯಾಗಿ ಮಹೇಶ್ ಹೆಬ್ಬಾರರು ಸಾರ್ವಜನಿಕರಿಗೆ ತೊಂದರೆಕೊಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಹಲ್ಲೆ ಮಾಡಿದ್ದಾರೆ ಎಂದು ಸಂಜೀವ ನಾಯ್ಕ್ ಪ್ರತಿ ದೂರು ನೀಡಿದ್ದಾರೆ.