ಅಮಾಸೆಬೈಲು: ಜುಲೈ ೧೨ (ಹಾಯ್ ಉಡುಪಿ ನ್ಯೂಸ್) ಮೆಸ್ಕಾಂ ಇಲಾಖೆಯ ಸ್ವತ್ತು ಗಳನ್ನು ಯಾರೋ ಕಳ್ಳರು ಕದ್ದ ಬಗ್ಗೆ ದೂರು ದಾಖಲಾಗಿದೆ.
ಮಚ್ಚಟ್ಟು ಗ್ರಾಮದ ಕುಂದ ಸಮೀಪ ಎ ಕೆ ಮಥಾಯಿಸ್ ಎಂಬವರ ಜಾಗದಲ್ಲಿ ಮೆಸ್ಕಾಂ ಇಲಾಖೆಯ 3 ಪೇಸಿನ . ಎಲ್ ಟಿ ಮಾರ್ಗ ಹಾದುಹೋಗಿದ್ದು ದಿನಾಂಕ 09/07/2022 ರಂದು ಸಂಜೆ 05:30 ಗಂಟೆಗೆ ಅಮಾಸೆಬೈಲು ಕ್ಯಾಂಪಿನ ಜೂನಿಯರ್ ಮಾರ್ಗದಾಳು ಸಿದ್ದರೂಢ ಗೋಟುರೆ ಇವರು ಮಂಜುನಾಥ ಶ್ಯಾನುಬಾಗ ( 47) ಕಿರಿಯ ಇಂಜಿನಿಯರ ಮೆಸ್ಕಾಂ ಹಾಲಾಡಿ ಶಾಖೆ ಇವರಿಗೆ ಕರೆ ಮಾಡಿ ಕುಂದ ಸಮೀಪ ಹಾದುಹೋಗಿರುವ ಎಲ್ ಟಿ ಮಾರ್ಗದ 3ಕಂಬಗಳನ್ನು ತುಂಡು ಮಾಡಿ ಈ ಮಾರ್ಗದ ಅಲ್ಯುಮಿನಿಯಂ ವಾಹಕಗಳನ್ನು ಸ್ಪಾರ್ನ ಗಳನ್ನು ಯಾರೋ ಕಳ್ಳರು ಕದ್ದು ಹೋಗಿರುತ್ತಾರೆ ಎಂದು ತಿಳಿಸಿದ್ದು ಮಂಜುನಾಥ ಶಾನುಭಾಗ್ ರವರು ಬಂದು ನೋಡಿರುತ್ತಾರೆ ನಂತರ ದಿನಾಂಕ 10/07/2022 ರಂದು ಪುನಃ ಇದೇ ಮಾರ್ಗದ ಇನ್ನೊಂದು ಕಂಬವನ್ನು ತುಂಡರಿಸಿ ಅಲ್ಯುಮಿನಿಯಂ ವಾಹಕಗಳನ್ನು ಹಾಗೂ ಅಲ್ಲಿಯೇ ಶೆಡ್ ನಲ್ಲಿದ್ದ ಹಳೆಯ ಪಂಪ್ ಸೆಟ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳವಾದ ಸ್ವತ್ತಿನ ಅಂದಾಜು ಮೌಲ್ಯ 90,000 ಆಗಿರುತ್ತದೆ.ಎಂದು ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.