ಕಾಪು: ಜುಲೈ ೧೦ (ಹಾಯ್ ಉಡುಪಿ ನ್ಯೂಸ್) ಮನೆಯಿಂದ ಕೆಲಸಕ್ಕೆಂದು ಹೋದ ಯುವಕ ಕಾಣೆಯಾಗಿದ್ದಾನೆ ಎಂದು ದೂರು ದಾಖಲಾಗಿದೆ.
ಮಣಿಪುರ,ಸಮ್ರಧ್ಧಿ ನಗರ,ಮಾತಾ ನಿಲಯದ ನಿವಾಸಿ ರವಿ ಎಂಬವರ ಅಕ್ಕನ ಮಗ ಪುನೀತ್ (೨೮) ದಿನಾಂಕ: 06.07.2022 ರಂದು ಬೆಳಿಗ್ಗೆ 09:00 ಗಂಟೆಗೆ ಕೆಲಸಕ್ಕೆಂದು ಹೋದವನು ವಾಪಾಸು ಮನೆಗೆ ಬಾರದೆ ಇದ್ದು ರವಿಯವರು ಕಾಣೆಯಾದ ಪುನೀತ್ ನ ಮಾಲಿಕ ಸಚಿನ್ ರವರ ಬಳಿ ವಿಚಾರಿಸಿದಾಗ ಆತನು ಕೆಲಸಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿದ್ದು ಗಾಬರಿಗೊಂಡು ಆತನ ಪತ್ತೆಗಾಗಿ ಹುಡುಕಾಡಲಾಗಿ ಪತ್ತೆಯಾಗದೆ ಇದ್ದು ಆತನ ಸ್ಕೂಟರ್ ಕಲ್ಮಂಜೆ ಸೇತುವೆ ಬಳಿ ನಿಂತಿರುವುದಾಗಿ ತಿಳಿಯಿತು ರವಿಯವರು ತಮ್ಮ ಸಂಬಂದಿಕರೊಂದಿಗೆ ಹೋಗಿ ನೋಡಿದಾಗಿ ಸ್ಕೂಟರ್ ಅಲ್ಲಿಯೇ ಇದ್ದು ಆತ ಯಾವುದೋ ಕಾರಣದಿಂದ ಸ್ಕೂಟರ ನ್ನು ನಿಲ್ಲಿಸಿ ಹೋಗಿ ಕಾಣೆಯಾಗಿರಬಹುದಾಗಿದೆ ಎಂದು ಪೊಲೀಸರಿಗೆ ದೂರನ್ನು ನೀಡಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.