Spread the love

ಮಣಿಪಾಲ: ಜುಲೈ ೬(ಹಾಯ್ ಉಡುಪಿ ನ್ಯೂಸ್) ಹೋಟೆಲ್ ನಲ್ಲಿ ತಿಂಡಿ ತಿಂದು ಹಣ ಕೊಡದೆ ಪಿಸ್ತೂಲು ತೋರಿಸಿ ಬೆದರಿಸಿ ದ ಘಟನೆ ಮಣಿಪಾಲದಲ್ಲಿ ನಡೆದಿದೆ.

ದಿನಾಂಕ 05/07/2022 ರಂದು 3:30 ಗಂಟೆಗೆ ಮೊಹಮ್ಮದ್ ಅನ್ವರ್ ಎಂಬಾತಉತ್ತರ ಕನ್ನಡ ಜಿಲ್ಲೆ ,ಭಟ್ಕಳ , ಮುರ್ಡೇಶ್ವರ ದ ಮಾವಳ್ಳಿ , ಹಮ್ಜಾ ಕಾಲೋನಿ ನಿವಾಸಿ ಹಬೀಬುಲ್ಲಾ (೩೨) ಎಂಬವರ ಮಣಿಪಾಲದ ಹೋಟೆಲ್ ಗೆ KA-19-MD-4153 ನೇ ಕಾರಿನಲ್ಲಿ ಬಂದು ತಿಂಡಿ ತಿಂದು ಚಾ ಕುಡಿದು ಅದರ ಹಣವನ್ನು ಪಾವತಿಸದೇ ತನ್ನ ಕಾರಿನ ಬಳಿ ಹೋದಾಗ ಹಬೀಬುಲ್ಲಾ ಕಾರಿನ ಬಳಿ ತೆರಳಿ ಹಣವನ್ನು ಕೇಳಿದಾಗ ಮೊಹಮ್ಮದ್ ಅನ್ವರ್ ಕೈ ಯಿಂದ ಹೊಡೆದು ಅಡ್ಡಗಟ್ಟಿ ಪಿಸ್ತೂಲ್ ತರಹ ಇರುವ ಒಂದು ವಸ್ತುವನ್ನು ತೋರಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಹಬೀಬುಲ್ಲಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

error: No Copying!