Spread the love

ಕುಂದಾಪುರ: ಜೂನ್ ೨೯(ಹಾಯ್ ಉಡುಪಿ ನ್ಯೂಸ್) ಜುವೆಲ್ ಪಾರ್ಕ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡಿದ ಏಳು ಜನರನ್ನು ಪೋಲಿಸರು ಬಂಧಿಸಿದ್ದಾರೆ.

ಕುಂದಾಪುರ  ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಕಾಂತ ಕೆ ಇವರಿಗೆ ದಿನಾಂಕ 28/06/2022ರಂದು ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಜ್ಯುವೆಲ್ ಪಾರ್ಕ್ ಲಾಡ್ಜಿನ  ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು  ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್  ಆಟವಾಡುತ್ತಿದ್ದಾರೆಂದು ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಕೂಡಲೇ ದಾಳಿ ಮಾಡಿ 1. ಸಂಜೀವ ಪೂಜಾರಿ (45), ವಂಡ್ಸೆ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು, 2. ಅಭಿಜಿತ್ (29), ಮಾರಣಕಟ್ಟೆ ಪೇಟೆ, ಚಿತ್ತೂರು ಗ್ರಾಮ, ಕುಂದಾಪುರ ತಾಲೂಕು, 3. ನರಸಿಂಹ ಪೂಜಾರಿ (61), ಬಳ್ಕೂರು ಗ್ರಾಮ, ಕುಂದಾಪುರ ತಾಲೂಕು, 4. ಚಂದ್ರ (49), ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಫುರ ತಾಲೂಕು, 5. ಅಶ್ವತ್ (35), ಹೆಮ್ಮಾಡಿ, ಹೆಮ್ಮಾಡಿ ಗ್ರಾಮ, ಕುಂದಾಫುರ ತಾಲೂಕು, 6. ಅಶೋಕ (50), ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಫುರ ತಾಲೂಕು, 7. ಭುಜಂಗ ಶೆಟ್ಟಿ (44), ತಲ್ಲೂರು, ತಲ್ಲೂರು ಗ್ರಾಮ, ಕುಂದಾಫುರ ತಾಲೂಕು, 8. ಆದರ್ಶ (39), ನೂಜಾಡಿ ರಸ್ತೆ, ಕಾಸನಕಟ್ಟೆ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದು ಅವರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 1,61,000/, ನೆಲಕ್ಕೆ ಹಾಸಿದ ಬಟ್ಟೆ, ಇಸ್ಪೀಟು ಎಲೆಗಳು-52 ನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!