
ಮಣಿಪಾಲ: ಜೂನ್ ೨೬ (ಹಾಯ್ ಉಡುಪಿ ನ್ಯೂಸ್) ಯುವಕರ ಗುಂಪೊಂದು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ದಿನಾಂಕ 24/06/2022 ರಂದು ಸಂಜೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಶರತ್ ಭಂಡಾರಿ ಎಂಬವನು ಉಡುಪಿ ಸಂತೆಕಟ್ಟೆಯ ಪುತ್ತೂರು ಗ್ರಾಮದ, ಡಾ.ಅಂಬೇಡ್ಕರ್ ರಸ್ತೆ ಯ ನಿವಾಸಿ ಧನಂಜಯ (38) ಎಂಬವರಿಗೆ ಹಲ್ಲೆ ಮಾಡಬೇಕೆಂಬ ಉದ್ದೇಶದಿಂದ ಯುವಕರನ್ನು ಸೇರಿಸಿ ಗುಂಪು ಕಟ್ಟಿಕೊಂಡು ಕಾದು ನಿಂತಿದ್ದು , ಧನಂಜಯ ರವರು ಆ ರಸ್ತೆಯಲ್ಲಿ ಸ್ನೇಹಿತ ನೊಂದಿಗೆ ಬಂದೊಡನೆ ಅವರನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಅವಾಚ್ಯವಾಗಿ ಬೈದು ಪರಿಶಿಷ್ಟ ಜಾತಿಗೆ ಸೇರಿದ ಧನಂಜಯರಿಗೆ ಜಾತಿ ನಿಂದನೆ ಮಾಡಿ ಬೈದು ಬೆದರಿಕೆ ಹಾಕಿದ್ದಲ್ಲದೆ 1) ಸಂದೀಪ್, 2) ಶರತ್ ಭಂಡಾರಿ, 3)ಇಶಾಂತ್, ದೊಡ್ಡಣಗುಡ್ಡೆ, 4) ನಿಶಾಂತ್ ಅಂಬಾಗಿಲು ಮತ್ತು ಇತರರು ಸೇರಿ ಧನಂಜಯ ರವರಿಗೆ ಮತ್ತು ಅವರ ಸ್ನೇಹಿತ ಶೋಯಿಬ್ ಯಾಸಿನ್ ರವರಿಗೆ ಕೈಯಿಂದ ಹೊಡೆದು ಮುಂದಕ್ಕೆ ನಮ್ಮ ವಿಷಯಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ನೀಡಿರುತ್ತಾರೆ ಎಂದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.