Spread the love

ಮಲ್ಪೆ: ಜೂನ್ ೨೭(ಹಾಯ್ ಉಡುಪಿ ನ್ಯೂಸ್) ಮದ್ಯದ ಅಮಲಿನಲ್ಲಿ ಯುವಕನೋರ್ವ ಪೊಲೀಸ್ ಠಾಣೆಗೆ ತನ್ನ ಕಾರನ್ನು ಗುದ್ದಿದ ಘಟನೆ ನಡೆದಿದೆ.

ದಿನಾಂಕ: 27-06-2022 ರಂದು ರಾತ್ರಿ  1:00 ಗಂಟೆಯ ಸಮಯಕ್ಕೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಶಶಿಧರ ಹೆಚ್.ಸಿ ಯವರು ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಮಲ್ಪೆ ಪೊಲೀಸ್ ಠಾಣಾ ಎದುರಿನ ರಸ್ತೆಯಲ್ಲಿ ಶಬ್ದ ಬಂದದ್ದನ್ನು ಕೇಳಿ ಶಶಿಧರ ಹಾಗೂ ಠಾಣಾ ಪಹರೆ ಕರ್ತವ್ಯದಲ್ಲಿದ್ದ ಪಿಸಿ  ಸಚಿನ್ ರವರು ಠಾಣೆಯಿಂದ  ಹೊರಗೆ ಬಂದು ನೋಡಿದಾಗ  ಒಂದು ಕಾರು ಪೊಲೀಸ್ ಠಾಣಾ ಆವರಣ ಗೋಡೆಗೆ ಢಿಕ್ಕಿ   ಹೊಡೆದು ನಿಂತಿದ್ದು , ಅಲ್ಲಿಗೆ ಹೋಗಿ ನೋಡಿದಾಗ  ಚಾಲಕ  ಹಾಗೂ ಪ್ರಯಾಣಿಕರು  ಕಾರಿನಿಂದ  ಹೊರಗೆ ಬಂದಿದ್ದು ವಾಹನ ಢಿಕ್ಕಿ ಹೊಡೆದ ಪರಿಣಾಮ  ಮಲ್ಪೆ ಪೊಲೀಸ್ ಠಾಣೆಯ ಎದುರಿನ ಆವರಣದ ಗೋಡೆ ಸಂಪೂರ್ಣ ಜಖಂ ಗೊಂಡಿರುತ್ತದೆ, ಡಿಕ್ಕಿ ಹೊಡೆದ ವಾಹನ ಅಲ್ಲೇ ನಿಂತಿದ್ದು ,ಅದರ ನಂಬ್ರ OR-05- AJ-1237  PAJERO  ಕಾರು ಆಗಿರುತ್ತದೆ. ಕಾರು ಕೂಡಾ ಜಖಂಗೊಂಡಿರುತ್ತದೆ .

ಕಾರಿನ  ಚಾಲಕನ  ಹೆಸರು ಅಮಿತೇಶ ಆಗಿದ್ದು, ಆತನು ಮಧ್ಯ ಸೇವನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.OR-05- AJ-1237  PAJERO   ಕಾರಿನ ಚಾಲಕ ಅಮಿತೇಶ ತನ್ನ ವಾಹನವನ್ನುಅಜಾಗರೂಕತೆ ಹಾಗು ನಿರ್ಲಕ್ಷ್ಯತನದಿಂದ  ವಢಬಾಂಡೇಶ್ವರ  ಸರ್ಕಲ್ ನಿಂದ ಮಲ್ಪೆ ಬೀಚ್ ಕಡೆಗೆ ಚಲಾಯಿಸಿಕೊಂಡು ಬಂದು ಪೊಲೀಸ್ ಠಾಣೆಯ ಎದುರಿನ ಆವರಣ ಗೋಡೆಗೆ  ಡಿಕ್ಕಿ ಹೊಡೆದು ಜಖಂ ಗೊಳಿಸಿ ಸಾರ್ವಜನಿಕ ಆಸ್ತಿಗೆ  ಹಾನಿ ಮಾಡಿರುತ್ತಾನೆ ಎಂದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!