Spread the love

ಕುಂದಾಫುರ: ಜೂನ್ ೨೬ (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದವನನ್ನು ಬಂಧಿಸಿದ ಘಟನೆ ಶಾಸ್ತ್ರೀ ಸರ್ಕಲ್ ಬಳಿ ನಡೆದಿದೆ.

ದಿನಾಂಕ 25/06/2022 ರಂದು ಕುಂದಾಪುರ ಪೊಲೀಸ್ ಠಾಣೆ ಪಿಎಸ್ಐ ಸದಾಶಿವ ಆರ್ ಗವರೋಜಿರವರು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರೀ ವೃತ್ತದ ಬಳಿಯ ಫ್ಲೈ ಓವರ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಾರೆ ಎಂದು ಠಾಣಾ ಸಿಬ್ಬಂದಿ ಸಂತೋಷ್ ರವರು ನೀಡಿದ  ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ  12:45 ಗಂಟೆಗೆ ಸ್ಥಳಕ್ಕೆ  ತಲುಪಿ ಮರೆಯಲ್ಲಿ ನಿಂತು ನೋಡಿದಾಗ ವಡೇರಹೋಬಳಿ ಗ್ರಾಮದ ಶಾಸ್ತ್ರೀ ವೃತ್ತದ ಬಳಿ ಫ್ಲೈ ಓವರ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್‌ಬಂದರೆ 1/-ರೂ ಗೆ 70/-ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು, ಸ್ಥಳಕ್ಕೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದಾಗ ಆತನು ತನ್ನ ಹೆಸರು ಸುರೇಶ ದೇವಾಡಿಗ (48),ಮದ್ದುಗುಡ್ಡೆ, ಹೊಸಕೇರಿ, ಕಸಬಾ ಗ್ರಾಮ, ಕುಂದಾಪುರ ಎಂದು ತಿಳಿಸಿದ್ದು ತನ್ನ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು  ಆತನನ್ನು ವಶಕ್ಕೆ ಪಡೆದು ಆತನಿಂದ  ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 880/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!