ಉಡುಪಿ: ಜೂನ್ ೨೫(ಹಾಯ್ ಉಡುಪಿ ನ್ಯೂಸ್) ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿರುವ ಉಮೇಶ ನಾರಾಯಣ ಬಿರ್ತಿ ಎಂಬವರ ಮಗ ಆಯುಷ್ ( 22ವರ್ಷ) ಎಂಬವನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದು, ಕೆಲಸ ಸಿಗದ ಕಾರಣ ಸ್ವಲ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ದಿನಾಂಕ:24/06/2022 ರಂದು ಬೆಳಿಗ್ಗೆ 09:00 ಗಂಟೆಗೆ ಉಮೇಶ ನಾರಾಯಣ ಬಿರ್ತಿಯವರು ಕೆಲಸ ಮಾಡುತ್ತಿರುವ ಆಸ್ಪತ್ರೆಗೆ ಕಾಣೆಯಾದ ಆಯುಷ್‌ನನ್ನು ಕರೆದುಕೊಂಡು ಬಂದಿದ್ದು, ಸುಮಾರು11:30 ಗಂಟೆ ಸಮಯಕ್ಕೆ ತಾನು ಹೊರಗಡೆ ತಿರುಗಾಡಿ ಬರುವುದಾಗಿ ಹೇಳಿ ಹೋದವನು ಈವರೆಗೂ ಆಸ್ಪತ್ರೆಗೂ ವಾಪಾಸು ಬಾರದೇ, ಮನೆಗೂ ಬಾರದೇ ಮೊಬೈಲ್ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾರೆ ಎಂದು ದೂರು ನೀಡಿದ್ದು,ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.