Spread the love

ಕಾರ್ಕಳ: ಜೂನ್ ೨೨(ಹಾಯ್ ಉಡುಪಿ ನ್ಯೂಸ್) ನವಜಾತ ಶಿಶು ವಿನ ಜನನವನ್ನು ಗೌಪ್ಯ ವಾಗಿಡಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಶಿಶುವನ್ನು ಚರಂಡಿಗೆ ಎಸೆದು ಕೊಲೆಗೈದ ಘಟನೆ ನಡೆದಿದೆ.

ಕಾರ್ಕಳ ,ಕಸಬಾ ಗ್ರಾಮದ,ಪತೊಂಜಿಕಟ್ಟೆ ,ಪೆರ್ವಾಜೆ,೮ ನೇ ಕ್ರಾಸ್ ನ ನಿವಾಸಿ ಅಬ್ದುಲ್ ಖಾದರ್ (೫೭) ಇವರು  ದಿನಾಂಕ 21/06/2022 ರಂದು ಎಂದಿನಂತೆ ಕಾರ್ಕಳದ ಪೇಟೆಗೆ ಕಾರ್ಕಳ ಕಸಬಾ ಗ್ರಾಮದ ಪೆರ್ವಾಜೆ ಪತ್ತೊಂಜಿಕಟ್ಟೆ ಜುವಾ ಮೆನ್ಷನ್ 8ನೇ ಕ್ರಾಸ್ ನಲ್ಲಿರುವ ತಮ್ಮ ಮನೆಯಿಂದ ನಡೆದುಕೊಂಡು ಹೊರಟು ಸಂಜೆ 4:00 ಗಂಟೆಗೆ ಮನೆಯ ಎದುರುಗಡೆ ತೋಡಿನ ಬಳಿ ಬರುತ್ತಾ  ಹರಿಯುವ ತೋಡಿನ ಕೆಳಗಡೆ ನೀರಿನ ಬಳಿ ನೋಡಿದಾಗ ಒಂದು ನವಜಾತ ಶಿಶುವಿನ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು ಕೂಡಲೇ ಅವರು ಅದನ್ನು ನೀರಿನಿಂದ ಮೇಲಕ್ಕೆ ಎತ್ತಿ ನೋಡಿದಾಗ ಮಗು ಅದಾಗಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದಾರೆ.

ಯಾರೋ ಅಪರಿಚಿತರು ಮಗು ಹುಟ್ಟಬಾರದೆಂಬ ಉದ್ದೇಶದಿಂದಲೋ ಅಥವಾ ಮಗು ಹುಟ್ಟಿದ ಬಳಿಕ ಸಾಯಿಸುವ ಉದ್ದೇಶದಿಂದಲೋ ಅಥವಾ ಹುಟ್ಟಿದ ಮಗುವಿನ ಜನನದ ರಹಸ್ಯವನ್ನು  ಬಚ್ಚಿಡುವ ಉದ್ದೇಶದಿಂದ ಈ ಕೃತ್ಯವನ್ನು ಮಾಡಿ ಬಳಿಕ ಸಾಕ್ಷ್ಯಾಧಾರವನ್ನು ನಾಶ ಮಾಡುವ ಉದ್ದೇಶದಿಂದ ನವಜಾತಶಿಶುವಿನ ಮೃತದೇಹವನ್ನು ಅಬ್ದುಲ್ ಖಾದರ್ ರವರ ಮನೆಯ ಬಳಿ ಹರಿಯುವ ನೀರಿನ ಚರಂಡಿಗೆ  ಬಿಸಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!