IMG_20261129_135308.png
Spread the love

ಉಡುಪಿ: ದಿನಾಂಕ:29-11-2026( ಹಾಯ್ ಉಡುಪಿ ನ್ಯೂಸ್) ಕರಾವಳಿ ಬೈಪಾಸ್‌ನ ಕಟಿಲೇಶ್ವರಿ ಜನರಲ್ ಸ್ಟೋರ್ ಪಕ್ಕದ ಬಾಡಿಗೆ ಮನೆಯ ಬಳಿ ನಿಲ್ಲಿಸಿದ್ದ ಹೊಸ ಬಜಾಜ್ ಮೋಟಾರು ಸೈಕಲ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊರಬ ತಾಲೂಕಿನ ಶಕುನವಳ್ಳಿ ಅಂಚೆಯ ಬಿಳಗಲಿ ನಿವಾಸಿ ಶ್ರೀಧರ ಮಾಲತೇಶ ಬಾಳಿಹಳ್ಳಿ (21) ಅವರು ಸುಮಾರು ಎರಡು ವಾರಗಳ ಹಿಂದಷ್ಟೇ ಬಜಾಜ್ ಕಂಪೆನಿಯ ಹೊಸ ಮೋಟಾರು ಸೈಕಲ್ ಖರೀದಿಸಿದ್ದರು.
ನ.23ರಂದು ರಾತ್ರಿ 8 ಗಂಟೆಗೆ ಕರಾವಳಿ ಬೈಪಾಸ್‌ನ ಕಟಿಲೇಶ್ವರಿ ಜನರಲ್ ಸ್ಟೋರ್ ಪಕ್ಕದ ಬಾಡಿಗೆ ಮನೆಯ ಬಳಿ ಬೈಕ್ ನಿಲ್ಲಿಸಿ ಹೋಗಿದ್ದರು. ನ.28ರಂದು ಬೆಳಿಗ್ಗೆ 9 ಗಂಟೆಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ.
ನ.23ರ ರಾತ್ರಿ 8 ಗಂಟೆಯಿಂದ ನ.28ರ ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಅಪರಿಚಿತ ಕಳ್ಳರು ಬೈಕ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಬೈಕಿನ ಅಂದಾಜು ಮೌಲ್ಯ ₹2,13,000 ಆಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 159/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2)ರಡಿ ಪ್ರಕರಣ ದಾಖಲಾಗಿದೆ.

error: No Copying!