Spread the love

ಕುಂದಾಪುರ: ಜೂನ್ ೧೭(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದವನನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ಕುಂದಾಪುರ ಪೊಲೀಸ್‌ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ಸದಾಶಿವ ಆರ್ ಗವರೋಜಿ ಇವರಿಗೆ ದಿನಾಂಕ 24/5/2022 ರಂದು ಕುಂದಾಪುರ ತಾಲೂಕು, ಕುಂದಾಪುರ ಕಸಬಾ ಗ್ರಾಮದ ಹೊಸ ಬಸ್ಸು ನಿಲ್ದಾಣದ ಬಳಿ ಓರ್ವ ವ್ಯಕ್ತಿಯು  ಗಾಂಜಾ ಸೇವನೆ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿ̧ದ್ದು ಕೂಡಲೇ ಸ್ಫಳಕ್ಕೆ ಹೋದಾಗ ಅಲ್ಲಿ ಓರ್ವ  ವ್ಯಕ್ತಿಯು  ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ ಪ್ರೊಫೆಸರ್ & ಹೆಡ್,   ಫೊರೆನ್ಸಿಕ್ ಮೆಡಿಸಿನ್ ವಿಭಾಗ,  ಕೆ.ಎಂ.ಸಿ. ಮಣಿಪಾಲರವರ  ಮುಂದೆ ಹಾಜರುಪಡಿಸಿದ್ದು,  ಅವನನ್ನು  ಪರೀಕ್ಷಿಸಿದ ವೈದ್ಯರು  ಗಾಂಜಾ ಸೇವಿಸಿರುವ ಬಗ್ಗೆ  ದೃಢ ಪತ್ರ ನೀಡಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!