Spread the love

ಉಡುಪಿ: ಜೂನ್ ೧೮(ಹಾಯ್ ಉಡುಪಿ ನ್ಯೂಸ್ ) ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿ ತೂರಾಡುತ್ತಿದ್ದ ಯುವಕ ನನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ಉಡುಪಿ, ಸೆನ್ ಅಪರಾಧ ಪೋಲಿಸ್ ಠಾಣೆ, ಪೋಲಿಸ್ ಉಪನಿರೀಕ್ಷಕರಾದ ಲಕ್ಷ್ಮಣ ಅವರು ದಿನಾಂಕ 12/06/2022ರಂದು ಉಡುಪಿ ತಾಲೂಕು ಕಡೆಕಾರ್ ಗ್ರಾಮದ ಸರ್ವಿಸ್ ರಸ್ತೆಯಲ್ಲಿರುವ ಸುಜುಕಿ ಶೋ ರೂಂ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಯುವಕನನ್ನು ಸಂಶಯದ ಮೇರೆಗೆ ವಿಚಾರಣೆ ನಡೆಸಿದಾಗ ತಾನು ಉಡುಪಿ ತಾಲೂಕು,ಕಡೆಕಾರು ಗ್ರಾಮದ ಕಿನ್ನಿಮೂಲ್ಕಿ ರಾಮಚಂದ್ರ ಲೇನ್ ನ ಮಾಂಡವಿ ರೆಸಿಡೆನ್ಸಿಯ ಪ್ಲಾಟ್ ನಂಬ್ರ 005 ರ ನಿವಾಸಿ ಮೊಹಮ್ಮದ್ ಪರ್ವೆಜ್ (23) ಎಂದು ತಿಳಿಸಿದ್ದು ಆತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 16/06/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವ ಕಾರಣ ಆತನ ಮೇಲೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!