ಪಡುಬಿದ್ರಿ: ಜೂನ್ ೧೬(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದ ವನನ್ನು ಪೋಲಿಸರು ಬಂಧಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆ , ಪೊಲೀಸ್ ಉಪನಿರೀಕ್ಷಕರಾದ (ತನಿಖೆ) ಪ್ರಕಾಶ್ ಸಾಲ್ಯಾನ್ ಇವರಿಗೆ ದಿನಾಂಕ 15/06/2022 ರಂದು ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಪೇಟೆಯ ಅಪೋಲೋ ಮೆಡಿಕಲ್‌ನ ಹಿಂಭಾಗದ ಓಣಿಯಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಆಟದ ಬಗ್ಗೆ ಸಾರ್ವಜನಿಕವಾಗಿ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ ಉಡುಪಿ ಜಿಲ್ಲೆ , ಕಾಪು ತಾಲೂಕು, ಕಟಪಾಡಿ ಕೋಟೆ ಗ್ರಾಮ , ಪಳ್ಳಿ ಗುಡ್ಡೆ,ವಿನೋಬ ನಗರ ನಿವಾಸಿ ಅಬ್ದುಲ್ ರಜಾಕ್ (37) ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಬ್ದುಲ್ ರಜಾಕ್ ನು ಕಿರಣ್ ಕಟಪಾಡಿ ಎಂಬಾತನ ಸೂಚನೆಯಂತೆ ಜನರನ್ನು ಸೇರಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿದ್ದು, ಅಬ್ದುಲ್ ರಜಾಕ್ ಸಂಗ್ರಹಿಸಿದ ಹಣವನ್ನು ಕಿರಣ್ ಕಟಪಾಡಿಗೆ ನೀಡುತ್ತಿದ್ದು ಕಿರಣ್ ನೇ ಡ್ರಾ ನಡೆಸಿ ಬಹುಮಾನ ವಿಜೇತರಿಗೆ ಅಬ್ದುಲ್ ರಜಾಕ್ ಮುಖಾಂತರ ಹಣವನ್ನು ನೀಡುವುದಾಗಿ ತಿಳಿಸಿದ್ದು ನಂತರ ಅಬ್ದುಲ್ ರಜಾಕ್‌ನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,830/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನ ಪಡಿಸಿಕೊಂಡಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.