ಬೆಳಗಾವಿ – ಪ್ರಜಾಪ್ರಭುತ್ವದ ಮೂರು ಅಂಗಗಳಾದ ನ್ಯಾಯಾಂಗ ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ಇರುವಂತೆ ನಾಲ್ಕನೇ ಅಂಗವೆಂದು ಪರಿಗಣಿತವಾಗುತ್ತಿರುವ ಮಾಧ್ಯಮ ಕ್ಷೇತ್ರಕ್ಕೂ ನೀತಿ ನಿಯಮಗಳು ಮಾರ್ಗದರ್ಶಿ ಸೂತ್ರಗಳು ಅಗತ್ಯವಾಗಿ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ರಾಜಯೋಗಿ ಬ್ರಹ್ಮಕುಮಾರ ಶ್ರೀನಿಧಿ ಅಭಿಪ್ರಾಯಪಟ್ಟರು .
ಅವರೆಂದೂ ಬೆಳಗಾವಿಯಲ್ಲಿ ಆಜಾದಿ ಅಮೃತ ಮಹೋತ್ಸವ ಅಂಗವಾಗಿ ಬೆಳಗಾವಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾಧ್ಯಮದವರಿಗಾಗಿ ಹಮ್ಮಿಕೊಂಡಿದ್ದ ಸ್ಪಿರಿಚುವಲ್ ಎಂಪವರ್ ಮೆಂಟ್ ಫಾರ್ ಕೈಂಡ್ ನೆಸ್ & ಕಂಪ್ಯಾಶನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .
ಮಾಧ್ಯಮ ಕ್ಷೇತ್ರವು ಸ್ವಯಂ ರೂಪಿಸಿಕೊಳ್ಳಲಿಲ್ಲ ,ಅಲ್ಲಿ ಯಾವುದೇ ರೀತಿಯ ನಿಯಂತ್ರಣ ಇಲ್ಲದಂತಾಯಿತು ,ಕೆಲವು ಚಾನೆಲ್ ಗಳ ಕಾರ್ಯಕ್ರಮಗಳ ನಿರೂಪಕರುಗಳು ಯಾವುದೋ ವಿಷಯದ ಬಗ್ಗೆ ಚರ್ಚೆಗಿಂತಲೂ ಜಗಳವಾಡಿಸುವ ಕಾರ್ಯ ಮಾಡುವದು ಕಂಡುಬರುತ್ತದೆ ,ಸುಳ್ಳು ಸುದ್ದಿಗಳ ಹರಡುವಿಕೆ ಸಾಮಾಜಿಕ ಜಾಲತಾಣಗಳಿಂದ ಹೆಚ್ಚುತ್ತಿದೆ ,ಸಾಮಾಜಿಕ ಜಾಲತಾಣಗಳಿಂದ ಎಷ್ಟು ಲಾಭವಿದೆಯೋ ಅಷ್ಟೇ ಸಮಾಜಕ್ಕೆ ಕೆಲವು ಬಾರಿ ತಪ್ಪು ಸಂದೇಶಗಳು ಕೂಡ ಹೋಗುತ್ತಿವೆ ಇದೆಲ್ಲಾ 1 ಹಂತಕ್ಕೆ ನಿಯಂತ್ರಿಸಲ್ಪಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮೌಂಟ್ ಅಬು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ತನ್ನ 20 ಘಟಕಗಳ ಮುಖಾಂತರ ಮಾಧ್ಯಮ ಕ್ಷೇತ್ರ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿರುವವರಿಗಾಗಿ ಪ್ರತಿವರ್ಷ ಕಾರ್ಯಕ್ರಮಗಳನ್ನು ಆಯೋಜಿಸಿ ಅಧ್ಯಾತ್ಮಿಕ ಪ್ರಜ್ಞೆ ಮೂಡಿಸುವುದರೊಂದಿಗೆ ಪರಿವರ್ತನೆ ಕಾರ್ಯವನ್ನು ಮಾಡುತ್ತಿದೆ ,ಜಗತ್ತಿನ 140 ದೇಶಗಳಲ್ಲಿ ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು .
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ ಮಾತನಾಡಿ ಮಹಾತ್ಮ ಗಾಂಧಿ ಮತ್ತು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅಂಥವರು ಯಾವುದೇ ಫಲಾಪೇಕ್ಷೆ ಇಲ್ಲದೆ ದೇಶ ಸೇವೆಗಾಗಿ ಮಾಧ್ಯಮ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದರು ,ಮಾಧ್ಯಮ ಕ್ಷೇತ್ರ ಇಂದು ವ್ಯಾಪಾರೀಕರಣಗೊಂಡಿದೆ,ವ್ಯಾಪಾರಿಗಳು ಮಾಧ್ಯಮಕ್ಷೇತ್ರದ ಮುಖ್ಯಸ್ಥರಾದ ನಂತರ ಇಲ್ಲಿ ಲಾಭ ಮುಖ್ಯವಾಗಿದೆ ,ನೀತಿ ತತ್ವಗಳಿಗೆ ಇಲ್ಲಿ ಎರಡನೇ ಸ್ಥಾನ .ಇನ್ನೂ ಮಾಧ್ಯಮ ಕ್ಷೇತ್ರದಲ್ಲಿನ ಕೆಲವರು ಮಾಡುವ ಅತಿರೇಕಗಳಿಂದ ಕ್ಷೇತ್ರ ಮುಜುಗುರ ಅನುಭವಿಸುವಂತಾಗಿದೆ ,ಕೆಲವರಂತೂ ವರದಿ ಮಾಡುವುದನ್ನು ಬಿಟ್ಟು ನ್ಯಾಯಾಧೀಶನಂತೆ ವರ್ತಿಸುತ್ತಾರೆ,ಆಳುವವರು ದಾರಿ ತಪ್ಪಿದರೆ ಅವರನ್ನು ಮಾಧ್ಯಮದವರು ಸರಿದಾರಿಗೆ ತರುತ್ತಿದ್ದರು ಅದೊಂದು ಕಾಲವಿತ್ತು ಈಗ ಮಾಧ್ಯಮದವರೇ ದಾರಿ ತಪ್ಪಿದರೆ ಅವರನ್ನು ಸರಿದಾರಿಗೆ ತರುವುದು ಕಷ್ಟದ ಕೆಲಸ ಮಾಧ್ಯಮದವರಿಗೆ 1ಕಾಲದಲ್ಲಿ ಅಪಾರ ಗೌರವ ನೀಡುತ್ತಿದ್ದರು ಇಂದು ಹೆದರುತ್ತಿದ್ದಾರೆ ಎಂದರಲ್ಲದೆ ಮಾಧ್ಯಮ ಕ್ಷೇತ್ರಕ್ಕೊಂದು ನೀತಿ ಸಂಹಿತೆಯ ಅಗತ್ಯವಿದೆ ಎಂದರು .
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತರಾದ ಎನ್ ಯು ಜೆ ಜಿಲ್ಲಾಧ್ಯಕ್ಷ ಶ್ರೀಕಾಂತ್ ಕಾಕತೀಕರ್ ಮಾತನಾಡಿ ಕೊರೋನಾ ನಂತರದ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಅನುಭವಿಸಿದ ಕಷ್ಟ ನಷ್ಟಗಳನ್ನು ವಿವರಿಸಿದರು ,ಲೆಕ್ಕವಿಲ್ಲದಷ್ಟು ಜನ ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಕ್ಷೇತ್ರದ ಪುನರುಜ್ಜೀವನಕ್ಕಾಗಿ ಎಲ್ಲರೂ ಸೇರಿ ಶ್ರಮಿಸಬೇಕು ಎಂದರು .
ಕೆಯುಡಬ್ಲೂಜೆ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ ಟಿವಿ ಚಾನೆಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲವೂ ಸ್ವೀಕಾರಾರ್ಹವಲ್ಲ ಅದರಲ್ಲಿರುವ ಸಕಾರಾತ್ಮಕ ವಿಚಾರಗಳನ್ನು ಸ್ವೀಕರಿಸಬೇಕು , ಎಲ್ಲ ಕಾರ್ಯಕ್ರಮಗಳನ್ನು ಟಿಆರ್ ಪಿ ಹೆಚ್ಚಿಸುವುದಕ್ಕಾಗಿಯೇ ಮಾಡಲು ಸಾಧ್ಯವಿಲ್ಲ ಎಂದರು .
ಮರಾಠಿ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಶಹಾಪುರ ಅವರು ಮಾತನಾಡಿ ದೇಶದಲ್ಲಿ ಲೋಕತಂತ್ರ ಇಂದಿಗೂ ಗಟ್ಟಿಯಾಗಿ ನಿಂತಿದೆ ಅದಕ್ಕೆ ನಮ್ಮ ಸಂವಿಧಾನದ ಆಶಯ ಕಾರಣವಾದರೆ ಮತ್ತೊಂದೆಡೆ ಮಾಧ್ಯಮ ಕ್ಷೇತ್ರ ಕಾರಣ ಎಂದರು ,ಸಮಾಜದಲ್ಲಿನ ಅನಿಷ್ಠ ಪದ್ದತಿಗಳ ನಿರ್ಮೂಲನೆ ಮತ್ತು ಜನರಲ್ಲಿ ಶಾಂತಿ ಸೌಹಾರ್ದತೆ ಮೂಡಿಸುವ ಕಾರ್ಯದಲ್ಲಿ ಮಾಧ್ಯಮ ಕ್ಷೇತ್ರ ವಿಶೇಷ ಶ್ರಮ ವಹಿಸಬೇಕಿದೆ ಎಂದರು .
ಬೆಳಗಾವಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬ್ರಹ್ಮಕುಮಾರಿ ಅಂಬಿಕಾಜಿ ಅವರು ಮಾತನಾಡಿ ಪ್ರತಿಯೊಬ್ಬರೂ ತಮ್ಮೊಳಗಿನ ,ಕಾಮ, ಕ್ರೋಧ, ಲೋಭ ,ಮೋಹ, ದ್ವೇಷ ,ಮದ ,ಮತ್ಸರ ಮುಂತಾದ ಹತ್ತು ಶತ್ರುಗಳನ್ನು ಹೊರಹಾಕಬೇಕು ಅವುಗಳನ್ನು ಗೆಲ್ಲಬೇಕು ,ಇವೆಲ್ಲ ದೇಹದ ಗುಣಗಳು ಈ ಗುಣಗಳಿಂದ ದೂರವಾಗಿ ಪ್ರೀತಿ, ಪ್ರೇಮ, ಶಾಂತಿ , ಕರುಣೆ ಮುಂತಾದ ಆತ್ಮದ ಪರಮ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಅದರ ಪ್ರಕಾರ ನಡೆಯಬೇಕು ,ಆತ್ಮದ ಪರಮ ಗುಣವಾದ ಶಾಂತಿಯತ್ತ ಸಾಗಬೇಕು ಆತ್ಮದ ಪರಮಗುಣ ನಿಜವಾದ ಸ್ವರೂಪ ಶಾಂತಿ,ದಯೆ ,ಅಂತಕರಣ ಇದನ್ನು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ,ನಮ್ಮ ಕರ್ಮೇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಕೊಳ್ಳಬೇಕು ಈ ರೀತಿ ಆತ್ಮದ ಜಾಗೃತಿಯಾದರೆ ಕಲ್ಯಾಣವಾಗುತ್ತದೆ ಪಾಪಕರ್ಮವು ನಾಶವಾಗುತ್ತದೆ ಪುಣ್ಯ ರಾಗುವತ್ತ ಸಾಗುತ್ತೇವೆ ಎಂದರು .
ಬ್ರಹ್ಮಕುಮಾರಿ ವಿದ್ಯಾ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು ,ಬ್ರಹ್ಮಕುಮಾರ ಶ್ರೀಕಾಂತ್ ಅವರು ಸ್ವಾಗತಿಸಿದರು ,ಬ್ರಹ್ಮಕುಮಾರ ಮನೋಹರ್ ಅವರು ವಂದಿಸಿದರು .