Spread the love

ಬೆಳಗಾವಿ : ಜೂನ್ ೧೫(ಹಾಯ್ ಉಡುಪಿ ನ್ಯೂಸ್) ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿಯ ಲಕ್ಷ್ಮೀಟೇಕ್ ಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಇದೇ ತಿಂಗಳ 17 ರಿಂದ 21 ರವರೆಗೆ ಯೋಗ ಶಿಬಿರ ನಡೆಯಲಿದೆ .

ರಂಭಾಪುರಿ ಪೀಠದ ಶ್ರೀ .ಡಾ .ವೀರ ಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಯೋಗ ಶಿಬಿರದ ನೇತೃತ್ವವನ್ನು ಹುಕ್ಕೇರಿ ಹಿರೇಮಠದ ಷ ಬ್ರ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ವಹಿಸಲಿದ್ದಾರೆ .
ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಟಾನ ಹಿರೇಮಠ ಹುಕ್ಕೇರಿ ಇವರ ಸಹಯೋಗದಲ್ಲಿ ನಡೆಯಲಿರುವ ಈ ಯೋಗ ಶಿಬಿರವನ್ನು ಬೆಳಗಾವಿಯ ಚಿರಾಯು ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯ ಇವರು ನಡೆಸಿಕೊಡಲಿದ್ದಾರೆ .5ದಿನಗಳ ಕಾಲ ನಡೆಯಲಿರುವ ಶಿಬಿರದ ಸಂದರ್ಭದಲ್ಲಿ ಆರೋಗ್ಯ ಸಂಬಂಧಿ ಸಲಹೆಗಳನ್ನು ಚಿರಾಯು ಚಿಕಿತ್ಸಾಲಯದ ಡಾ .ಪದ್ಮನಾಭ ದರಬಾರೆ ಅವರು ನೀಡಲಿದ್ದಾರೆ.ಈ ಯೋಗ ಶಿಬಿರದಲ್ಲಿ ಭಾಗವಹಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ಡಾ ಪದ್ಮನಾಭ ದರಬಾರೆ ಇವರ ಮೊಬೈಲ್ 9606697512 ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದು ಬೆಳಗಾವಿಯ ಲಕ್ಷ್ಮಿ ಟೇಕಡಿ ಯಲ್ಲಿರುವ ಹುಕ್ಕೇರಿ ಹಿರೇಮಠದ ಪ್ರಕಟಣೆ ತಿಳಿಸಿದೆ .

Murugesh
error: No Copying!