Spread the love

ಪಡುಬಿದ್ರಿ: ಜೂನ್ ೧೬(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡಿ ಸುತ್ತಿದ್ದವನನ್ನು ಬಂಧಿಸಿದ ಘಟನೆ ನಡೆದಿದೆ.

ಪಡುಬಿದ್ರಿ ಪೊಲೀಸ್ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ಪುರುಷೋತ್ತಮ ಎ. ಇವರಿಗೆ ದಿನಾಂಕ 15/06/2022ರಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ತರಕಾರಿ ಮಾರುಕಟ್ಟೆಯ ಬಳಿ ಸಾರ್ವಜನಿಕ  ಸ್ಥಳದಲ್ಲಿ  ಓರ್ವ  ವ್ಯಕ್ತಿಯು ಮುಲಾಜಿಲ್ಲದೆ ಮಟ್ಕಾ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ ಕಾಪು ತಾಲೂಕು , ಪಲಿಮಾರು ಗ್ರಾಮ, ಹೆಜಮಾಡಿ ರಸ್ತೆ,ಅವರಾಲು ಮಟ್ಟು ನಿ‌ವಾಸಿ ಚಂದ್ರ(೪೮) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಮನೋಜ್‌‌ ಉಚ್ಚಿಲ ಎಂಬಾತನ ಸೂಚನೆಯಂತೆ  ಸಾರ್ವಜನಿಕರಿಂದ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಹೇಳುತ್ತಾ ಜನರನ್ನು ಸೇರಿಸಿ ಚೀಟಿ ಬರೆದು ಕೊಡುತ್ತಿದ್ದು, ಚಂದ್ರನು ಸಂಗ್ರಹಿಸಿದ ಹಣವನ್ನು ಮನೋಜ್ ಉಚ್ಚಿಲನಿಗೆ ನೀಡುತ್ತಿದ್ದು, ಮನೋಜ್ ಉಚ್ಚಿಲನು ಡ್ರಾ ನಡೆಸಿ ಬಹುಮಾನ ವಿಜೇತರಿಗೆ  ಚಂದ್ರನ ಮುಖಾಂತರ ಹಣವನ್ನು  ನೀಡುತ್ತಾನೆ ಎಂದಿದ್ದಾನೆ. ಚಂದ್ರನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,810/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿದ್ದು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!