IMG_20261101_164650.png
Spread the love

ಕಾಪು: ದಿನಾಂಕ:01-11-2026(ಹಾಯ್ ಉಡುಪಿ ನ್ಯೂಸ್) ಹೋಂಸ್ಟೇ ಒಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ಕೆಲವು ವ್ಯಕ್ತಿಗಳು ಹೋಂ ಸ್ಟೇ ಕಟ್ಟಡಕ್ಕೆ ಹಾನಿ ಮಾಡಿ ಇಪ್ಪತ್ತು ಲಕ್ಷ ರೂಪಾಯಿ ನಷ್ಟ ಉಂಟು ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ,ಕಲ್ಮಾಡಿ, ಬಿಲ್ಲು ಗುಡ್ಡೆ ನಿವಾಸಿ ಹರ್ಷಿತ್ ಎಸ್. ಕುಂದರ್  ಎಂಬವರು ತುಲಂ ಕಾಟೇಜಸ್ ಹೋಂಸ್ಟೇಯ ಮಾಲೀಕರಾಗಿದ್ದು,  ದಿನಾಂಕ:31.10.2026 ರಂದು ಮಧ್ಯಾಹ್ನ ಹರ್ಷಿತ್ ಎಸ್ ಕುಂದರ್ ರ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿ, ಹರ್ಷಿತ್ ರವರ ಹೋಂಸ್ಟೇ ಆಸ್ತಿಯಲ್ಲಿ ಯಾರೋ ಹಾನಿ ಉಂಟು ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದು. ಈ ವಿಷಯ ತಿಳಿದ ತಕ್ಷಣ, ಸುಮಾರು ಒಂದು ಗಂಟೆಯೊಳಗೆ ಹರ್ಷಿತ್ ರವರು ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ,ಅವರ ಆಸ್ತಿಗೆ ಹಾನಿಯಾಗಿರುವುದು ಕಂಡುಬಂದಿದ್ದು.

ಈ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಆಸ್ತಿಯೊಳಗೆ ಪ್ರವೇಶಿಸಿ, ಉದ್ದೇಶಪೂರ್ವಕವಾಗಿ ಹೋಂಸ್ಟೇ ಕಟ್ಟಡ ಮತ್ತು ಅದರಲ್ಲಿದ್ದ ವಿವಿಧ ಸೌಲಭ್ಯಗಳನ್ನು ಧ್ವಂಸಗೊಳಿಸಿರುವುದಾಗಿ. ಆವರಣವನ್ನು ಪರಿಶೀಲಿಸಿದಾಗ, ಎರಡು ಕಾಟೇಜ್‌ ಗಳ ಗೋಡೆಗಳನ್ನು ಸಂಪೂರ್ಣವಾಗಿ ಒಡೆದು ಧ್ವಂಸಗೊಳಿಸಿರುವುದು ಕಂಡುಬಂದಿದ್ದು. ಅಲ್ಲದೆ, ಎರಡು ಏರ್ ಕಂಡಿಷನರ್‌ ಗಳನ್ನು (ಎಸಿ) ಕಳವು ಮಾಡಿ. ಬಾತ್‌ರೂಮ್‌ ನ ಟೈಲ್ಸ್‌ ಗಳು, ಕಮೋಡ್‌ಗಳು, ಶವರ್‌ಗಳು, ವಾಶ್‌ಬೇಸಿನ್‌ಗಳು, ಕನ್ನಡಿಗಳು ಬಾಗಿಲುಗಳು ಹಾಗೂ ಒಳಗೊಂಡ ಇತರ ಸಾಮಗ್ರಿಗಳನ್ನು ಸಂಪೂರ್ಣವಾಗಿ ಒಡೆದು ಹಾಳುಮಾಡಿದ್ದು. ಕಟ್ಟಡದ ಗೋಡೆಗಳು ಮತ್ತು ಕೊಠಡಿಗಳು ಅವಶೇಷಗಳು ಆವರಣದಾದ್ಯಂತ ಚದುರಿಕೊಂಡಿದ್ದವು. ಘಟನೆಯ ಸಾಕ್ಷ್ಯಗಳನ್ನು ಮರೆಮಾಚುವ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಕಳವು ಮಾಡಿ. ಈ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಗುರುತು ಮತ್ತು ಅವರ ಕೃತ್ಯಗಳನ್ನು ಮರೆಮಾಚಲು ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿರುವ ಸಾಧ್ಯತೆಯೂ ಕಂಡುಬರುತ್ತದೆ.

ಘಟನೆ ನಡೆಯುವುದಕ್ಕೆ ಕೆಲವು ದಿನಗಳ ಮೊದಲು, ರಾಮಚಂದ್ರ ಎಂಬವರ ಮಗ ಗೌತಮ್ ಉಡುಪಿ ಜಿಲ್ಲೆಯ ಪಿತ್ರೋಡಿ, ಕಲ್ಪೆಬೈಲ್ ನಿವಾಸಿಗಳಿಂದ, ಹರ್ಷಿತ್ ರವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು. ಪ್ರಸ್ತುತ ಘಟನೆ ನಡೆಯುವುದಕ್ಕೂ ಮುನ್ನವೇ ಕೆಲವು ವ್ಯಕ್ತಿಗಳು ಹರ್ಷಿತ್ ರಿಗೆ ಪದೇ ಪದೇ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಾಗಿ ಬೆದರಿಕೆ ಹಾಕಿದ್ದು, ಪ್ರಸ್ತುತ ತನ್ನ ಹೋಮ್‌ ಸ್ಟೇ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಉಂಟುಮಾಡಿರುವ ಉದೇಶವಾಗಿರುತ್ತದೆ.

ಈ ಕೃತ್ಯವು ಹರ್ಷಿತ್ ರವರನ್ನು ಬೆದರಿಸುವ, ಅನ್ಯಾಯವಾಗಿ ಆರ್ಥಿಕ ನಷ್ಟವನ್ನುಂಟುಮಾಡುವ ಹಾಗೂ ಭಯ ಮತ್ತು ಅಭದ್ರತೆಯನ್ನು ಉಂಟುಮಾಡುವ ದುರುದ್ದೇಶದಿಂದಲೇ ನಡೆಸಲಾಗಿದೆಯೆಂಬ ಶಂಕೆಯಾಗಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಶಂಕೆ ಹೊಂದಿರುವ ವ್ಯಕ್ತಿಗಳಾದ ಗೌತಮ್, ರಾಮಚಂದ್ರ ಅವರ ಮಗ ಲಕ್ಷ್ಮಣ್ ಶ್ರೀಯಾನ್‌, ಚಂದ್ರಕಾಂತ್ ಮೆಂಡನ್, ವಿಷ್ಣು ಶ್ರೀಯಾನ್‌, ಪಾಂಡು ಶ್ರೀಯಾನ್‌ . ಈ ಘಟನೆಯಿಂದ ಹರ್ಷಿತ್ ರವರಿಗೆ ಸುಮಾರು ರೂ. 20,00,000/- (ರೂಪಾಯಿ ಇಪ್ಪತ್ತು ಲಕ್ಷ) ಆರ್ಥಿಕ ನಷ್ಟ ಉಂಟಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:144/2026 ಕಲಂ: 324(5) 351(2). 303(2). BNS and U/s: 2(a) PDLP Act ರಂತೆ ಪ್ರಕರಣ ದಾಖಲಾಗಿದೆ.

error: No Copying!