IMG_20261101_173429.png
Spread the love

ಬೈಂದೂರು:  ಬಿಜೂರು ಗ್ರಾಮದ ಅರೆಕಲ್ಲು ವಠಾರದಲ್ಲಿ ಹಣವನ್ನು ಪಣವಾಗಿಟ್ಟು ಗರ್ ಗರ್ ಮಂಡಲ್ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನೀಲ ಕುಮಾರ್ ಬಿ.ವೈ ಅವರು ಜುಗಾರಿ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನೀಲ ಕುಮಾರ್‌ ಬಿ.ವೈ  ರವರಿಗೆ ಬಿಜೂರು ಗ್ರಾಮದ ಅರೆಕಲ್ಲು ವಠಾರದಲ್ಲಿರುವ ಶ್ರೀಧರ ರವರ ಸಿಮೆಂಟ್‌ ಮತ್ತು ಕಿಟಕಿ ತಯಾರಿಸುವ ಶೆಡ್‌ ಎದುರಿನ ಖಾಲಿ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಗರ್‌ ಗರ್‌ ಮಂಡಲ್‌ ಜುಗಾರಿ ಆಡುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ಖಚಿತ ಮಾಹಿತಿಯ ಮೇರೆಗೆ ಕೂಡಲೇ ಠಾಣೆಯ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದಾಗ ಅಲ್ಲಿ ಗರ್‌ ಗರ್‌ ಮಂಡಲ್‌ ಜುಗಾರಿ ಆಟ ಆಡುತ್ತಿದ್ದವರು ಪೊಲೀಸರು ದಾಳಿ ನಡೆಸಲು ಸುತ್ತುವರೆಯುತ್ತಿರುವಾಗ ಕೆಲವು ಆಪಾದಿತರು ಕತ್ತಲಲ್ಲಿ ಓಡಿ ಹೋಗಿದ್ದು ಅವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ಸತೀಶ, ಪ್ರವೀಣ, ಅಮೀತ ಹಾಗೂ ಇತರರು ಇರುವುದಾಗಿ ತಿಳಿಸಿದ್ದು ಅವರಿಗೆ ತನಿಖೆಗೆ ಹಾಜರಾಗುವಂತೆ 35(3) BNSS ನೋಟಿಸ್‌ ನೀಡಿ ಗರ್‌ ಗರ್‌ ಮಂಡಲ್‌ ಜುಗಾರಿ ಆಟಕ್ಕೆ ಉಪಯೋಗಿಸಿದ ಗರ್‌ ಗರ್‌ ಮಂಡಲ್‌ ಚಿತ್ರ ಇರುವ ಪ್ಲಾಸ್ಟೀಕ್‌ ಶೀಟ್‌ ಮತ್ತು 25 ಮರದ ಗರ್‌ ಗರ್‌ ಮಂಡಲ್‌ ದಾಳ ಪ್ಲಾಸ್ಟೀಕ್‌ ಡಬ್ಬ -01 ಕ್ಯಾಂಡಲ್‌ ಹಚ್ಚಿ ಇಟ್ಟಿರುವ -02 ಪ್ಲಾಸ್ಟೀಕ್‌ ಡಬ್ಬ ನಗದು 620/- ರೂ, Chavi ಕಂಪನಿ ಬೆಂಕಿ ಪಟ್ಟಣ-01 OPPO ಮೊಬೈಲ್‌ 01 ಹಾಗೂ 6 ಮೋಟರ್‌ ಸೈಕಲನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ:150/2026 ಕಲಂ:87 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!