IMG-20261031-WA0031.jpg
Spread the love

ಉಡುಪಿ: ದಿನಾಂಕ:01-11-2026(ಹಾಯ್ ಉಡುಪಿ ನ್ಯೂಸ್) ಬಾರ್ಕೂರು ಬಿಲ್ಲವರ ಸೇವಾ ಸಂಘ (ರಿ) ಇದರ ಕೆಲವು ಸದಸ್ಯರು ಆಡಳಿತ ಮಂಡಳಿಯ ಚುನಾವಣೆ ನಡೆಸದೆ ಸಹಕಾರ ಇಲಾಖೆಗೆ ನಕಲಿ ಸಹಿಗಳುಳ್ಳ ಸುಳ್ಳು ದಾಖಲೆಗಳನ್ನು ಒಪ್ಪಿಸಿ ವಂಚನೆ ನಡೆಸಿದ್ದಾರೆ ಎಂದು ಬಿಲ್ಲವ ಸಮುದಾಯದ ಸದಸ್ಯರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ತಾರೀಕು : 09/08 /2026 ರಂದು ಆದಿತ್ಯವಾರ ಪೂರ್ವಾಹ್ನ ಗಂಟೆ ಹತ್ತಕ್ಕೆ ಸರಿಯಾಗಿ ಬಾರ್ಕೂರು ಬಿಲ್ಲವ ಸೇವಾ ಸಂಘ( ರಿ)ಇದರ ಸರ್ವ ಸದಸ್ಯರ ಮಹಾಸಭೆಯು ನಡೆದಿದ್ದು ಈ ಸಭೆಯಲ್ಲಿ ಅನೇಕ ವಿಚಾರಗಳು ಚರ್ಚೆಯಾಗಿದ್ದು ಅದರಲ್ಲಿ ಮುಖ್ಯವಾಗಿ ಬಾಬು ಶಿವ ಪೂಜಾರಿಯವರು ಉಚಿತವಾಗಿ ಬಿಲ್ಲವ ಸಂಘಕ್ಕೆ ಗ್ರಂಥಾಲಯ ಕಟ್ಟಡ ಕಟ್ಟಿಕೊಡುವ ಬಗ್ಗೆ ಅನುಮೋದನೆಗಾಗಿ ಸಭೆಯಲ್ಲಿ ಇಟ್ಟಿದ್ದು ಈ ನಿರ್ಣಯದ ವಿಷಯವಾಗಿ ಹಲವು ಚರ್ಚೆಗಳು ಅಂದರೆ ಬಿಲ್ಲವ ಸಂಘದ ಮಂದಿರದ ಮುಂದೆ 2400 ಚದರಡಿ ವಿಸ್ತೀರ್ಣದ ಕಟ್ಟಡ ಬಂದರೆ ಬಿಲ್ಲವ ಸಂಘದ ಮಂದಿರಕ್ಕೆ ಅಡ್ಡವಾಗುವುದಲ್ಲದೆ ಬಿಲ್ಲವ ಸಂಘದಲ್ಲಿ ನಡೆಯುವಂತ ಸಭೆ ಸಮಾರಂಭಗಳಿಗೆ, ಕಾರ್ಯಕ್ರಮಗಳಿಗೆ ಪಾರ್ಕಿಂಗ್ ಸಮಸ್ಯೆ ಉಂಟಾಗುವುದರ ವಿರೋಧ ಬಂದದ್ದಲ್ಲದೆ, ಇದರ ಬಗ್ಗೆ ಸ್ಪಷ್ಟನೆ ಕೇಳುವುದರ ಜೊತೆಗೆ ಈ ಕಟ್ಟಡ ಕಟ್ಟಿಕೊಟ್ಟ ನಂತರ ಬಾಬು ಶಿವ ಪೂಜಾರಿ ಅವರು ಈ ಕಟ್ಟಡದ ವಿಚಾರವಾಗಿ ವಿಧಿಸುವ ಶರತ್ತುಗಳ ಬಗ್ಗೆ ಕೇಳಿದಾಗ ಇದು ಯಾವುದರ ಬಗ್ಗೆಯೂ ಕೂಡ ಆಡಳಿತ ಮಂಡಳಿ ಅವರಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಬಾಬು ಶಿವ ಪೂಜಾರಿಯವರು ಬಂದು ಸಭೆ ಕರೆದು ಸಾರ್ವಜನಿಕರಿಗೆ ಸ್ಪಷ್ಟನೆ ಕೊಟ್ಟ ನಂತರವೇ ಈ ನಿರ್ಣಯವು ಮುಂದಿನ ಸಭೆಯಲ್ಲಿ ಅನುಮೋದನೆ ಗಳಿಸುವಂತೆ ಸಭೆಯಲ್ಲಿ ತಿಳಿಸಲಾಯಿತು ಹಾಗಾಗಿ ಕಟ್ಟಡದ ವಿಚಾರವಾಗಿ ಯಾವ ನಿರ್ಣಯವು ಕೂಡ ಅಂಗೀಕಾರವಾಗಿರುವುದಿಲ್ಲ…

ಅಷ್ಟೇ ಅಲ್ಲದೆ ಮುಂದಿನ ವಿಚಾರವಾಗಿ ಆಡಳಿತ ಮಂಡಳಿಯ ರಚನೆಯ ಬಗ್ಗೆ ಹಾಗೂ ಅಧ್ಯಕ್ಷರ ಆಯ್ಕೆಯಲ್ಲಿ ಹಲವು ಚರ್ಚೆಗಳು ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಲವರು ಉಮೇದುವಾರಿಗಳು ಇದ್ದದ್ದರಿಂದ ಸಭೆಯಲ್ಲಿ ಗದ್ದಲ ಉಂಟಾಗಿದ್ದರಿಂದ ಅಧ್ಯಕ್ಷರಾದ ಸರ್ವೋತ್ತಮ ಪೂಜಾರಿ ಹಾಗೂ ಗಣೇಶ್ ಪೂಜಾರಿಯವರು ಆಡಳಿತ ಮಂಡಳಿಯನ್ನು ಚುನಾವಣೆ ಮುಖಾಂತರ ಆಯ್ಕೆಗೊಳಿಸುವುದಾಗಿ ಸಭೆಯಲ್ಲಿ ತಿಳಿಸಿ ಹೊರ ನಡೆದರು.. ಅದಾದ ನಂತರ ಸ್ವಲ್ಪ ದಿನ ಸುಮ್ಮನಿದ್ದ ನಾವು ಸಂಘದ ಅಭಿವೃದ್ಧಿ ದೃಷ್ಟಿಯಿಂದ ಸಂಘದ ಅಜೀವ ಗೌರವ ಅಧ್ಯಕ್ಷರಾದ ಶ್ರೀ ಬಾಬು ಶಿವ ಪೂಜಾರಿಯವರ ಮನೆಗೆ ನಾಲೈದು ಮಂದಿ ಹೋಗಿ ನಿಮ್ಮ ನೇತೃತ್ವದಲ್ಲಿ ಈಗ ಆಗಿರುವಂತ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ತಿಳಿಸಿದೆವು. ಆದರೆ ಯಾವುದಕ್ಕೂ ಒಪ್ಪದ ಬಾಬು ಶಿವ ಪೂಜಾರಿ ಅವರು ಹಿಂದಿನ ಆಡಳಿತ ಮಂಡಳಿಯೇ ಮುಂದಿನ ಎರಡು ವರ್ಷಕ್ಕೆ ಆಡಳಿತ ಮಂಡಳಿಯನ್ನು ವಿಸ್ತರಣೆ ಮಾಡಿ ರಚನೆ ಮಾಡಿಕೊಂಡು ಬರಲು ವಕೀಲರ ಬಳಿ ತೆರಳಿರುವುದರ ಬಗ್ಗೆ ಮಾಹಿತಿ ನೀಡಿದರು ಆದರೆ ನಾವು ಈ ವಿಷಯವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಇದೆಲ್ಲ ಆಗಿ ಸುಮಾರು ಎರಡು ತಿಂಗಳ ನಂತರ ಒಂದು ಮಾಹಿತಿಯ ಪ್ರಕಾರ ಹಿಂದಿನ ಆಡಳಿತ ಮಂಡಳಿಯ ಸದಸ್ಯರುಗಳೇ ಮುಂದಿನ ಎರಡು ವರ್ಷ ಅವಧಿಗೆ ಆಡಳಿತ ಮಂಡಳಿಯನ್ನು ರಚಿಸಿಕೊಂಡು ಸುಮಾರು 64 ಜನರ ಆಡಳಿತ ಮಂಡಳಿಯನ್ನು ರಚಿಸಿಕೊಂಡು ಬಂದಿರುವ ಮಾಹಿತಿಯನ್ನು ನಾವು ತಿಳಿದುಕೊಳ್ಳುತ್ತೇವೆ..

ಇದೆಲ್ಲವನ್ನು ಪರಿಶೀಲಿಸುವ ದೃಷ್ಟಿಯಿಂದ ಮಾಹಿತಿ ಹಕ್ಕು ಕಾರ್ಯಕರ್ತರಾದ ಶಂಕರ್ ಶಾಂತಿಯವರು ಸಹಕಾರ ಇಲಾಖೆಗೆ ಅರ್ಜಿ ಮುಖೇನವಾಗಿ ಇದೆಲ್ಲದರ ದಾಖಲೆ ಪಡೆದು ನೋಡಿದಾಗ ನಮಗೆ ತಿಳಿದಿರುವ ವಿಷಯವೆಂದರೆ ಆಡಳಿತ ಮಂಡಳಿಯ 64 ಜನರ ಪೈಕಿ ಸುಮಾರು 57 ,58 ಜನರ ಸಹಿ ನಕಲು ಮಾಡಿ ಭಾವಚಿತ್ರವನ್ನು ದಾಖಲೆಯಲ್ಲಿ ಸೇರಿಸಿ ಸುಳ್ಳು ದಾಖಲೆ ಸೃಷ್ಟಿಸಿ ರಚಿಸಿರುವುದು ತಿಳಿದುಬಂದಿತು. ಅಷ್ಟೇ ಅಲ್ಲದೆ ಮುರಿದು ಬಿದ್ದ ಮಹಾಸಭೆ ಮುರಿದು ಬಿದ್ದ ನಿರ್ಣಯಗಳು ಎಲ್ಲಾ ನಡೆದಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಲವರ ಸಹಿ ಹಾಜರಾತಿ ಪುಸ್ತಕಕ್ಕೆ ನಕಲು ಮಾಡಿ ಸಹಕಾರ ಇಲಾಖೆಗೆ ವಂಚಿಸುವುದಲ್ಲದೆ, ನಾವು ಮೇಲೆ ನಮೂದಿಸಿದ ನಿರ್ಣಯದ ವಿಚಾರ ಅಂದರೆ ಬಾಬು ಶಿವು ಪೂಜಾರಿಯವರು ನಿರ್ಮಾಣ ಮಾಡಿಕೊಡುವ ಕಟ್ಟಡದ ವಿಚಾರವಾಗಿ, ಶ್ರೀ ಬಾಬು ಶಿವ ಪೂಜಾರಿಯವರು 80 ಲಕ್ಷ ವೆಚ್ಚದಲ್ಲಿ ಬಿಲ್ಲವ ಸಂಘದ ಆವರಣದಲ್ಲಿ 2400 ಚದರಡಿಯ ಕಟ್ಟಡ ನಿರ್ಮಾಣ ಮಾಡಿಕೊಡಲಿದ್ದಾರೆ, ಇದರಲ್ಲಿ ಕಟ್ಟಡದ ಒಂದು ಭಾಗ ಬಾಬು ಶಿವ ಪೂಜಾರಿಯವರ ಪುಸ್ತಕಗಳು ಹಾಗೂ ಅವರಿಗೆ ಬಂದಂತಹ ಸ್ಮರಣಿಕೆಗಳು ಫಲಕಗಳು ಇಡಲಿದ್ದು ಈ ಕಟ್ಟಡದ ಅಧಿಕಾರವು ಸುಮಾರು 50 ವರ್ಷಗಳ ಕಾಲ ಅವರ ಕುಟುಂಬದ ಆಗಿದ್ದು ಇದನ್ನು ಪ್ರಶ್ನಿಸುವ ಅಧಿಕಾರ ಸಮುದಾಯದವರಾಗಲಿ ಬೇರೆ ಇನ್ಯಾರಿಗೂ ಕೂಡ ಕೇಳುವ ಅಧಿಕಾರ ಇರುವುದಿಲ್ಲವೆಂದು ನಮೂದಿಸಿರುತ್ತಾರೆ. ಇದೆಲ್ಲ ವಿಚಾರ ನಮಗೆ ತಿಳಿದು ಆಘಾತವೇ ಆಗಿದೆ.. ಇವರು ಬಿಲ್ಲವ ಸಂಘಕ್ಕೆ ಹಾಗೂ ಬಿಲ್ಲವ ಸಮುದಾಯಕ್ಕೆ ಸಂಪೂರ್ಣವಾಗಿ ಅನ್ಯಾಯ ಹಾಗೂ ದ್ರೋಹ ಮಾಡಿರುವುದು ಕಂಡು ಬೇಸರವಾಗಿದೆ.. ಈಗಾಗಲೇ ಆಡಳಿತ ಮಂಡಳಿಯಲ್ಲಿ 64 ಜನರ ಪೈಕಿ ಅಂದಾಜು 38 ರಿಂದ 40 ಜನ ಈಗಾಗಲೇ ನನ್ನ ಸಹಿ ನಕಲು ಮಾಡಿ ನನ್ನ ಭಾವಚಿತ್ರ ದುರುಪಯೋಗಪಡಿಸಿಕೊಂಡು ಬಂದಿರುವುದರ ಬಗ್ಗೆ ನಮಗೂ ಹಾಗೂ ಈ ವಿಷಯಕ್ಕೂ ಏನು ಸಂಬಂಧವಿಲ್ಲವೆಂದು ಸಹಕಾರ ಇಲಾಖೆಗೆ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.. ಅಷ್ಟೇ ಅಲ್ಲದೆ ಈಗಾಗಲೇಸರಿ ಸುಮಾರು ಎಂಟರಿಂದ ಹತ್ತು ಜನ ಪೊಲೀಸ್ ಠಾಣೆಗೂ ಕೂಡ ದೂರು ದಾಖಲಿಸಿದ್ದಾರೆ ಎಂದು ಬಿಲ್ಲವ ಸಮುದಾಯ ಬಾಂಧವರು, ಬಿಲ್ಲವರ ಸಂಘ ಬಾರ್ಕೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!