IMG_20261024_194353.png
Spread the love

ಮಲ್ಪೆ: ದಿನಾಂಕ:24-10-2026(ಹಾಯ್ ಉಡುಪಿ ನ್ಯೂಸ್) ಅಂಗಡಿ ಎದುರು ಹಲವರು ಸಿಗರೇಟು ಸೇದುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅಣ್ಣ ನ ಮಗನೇ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಚಂದ್ರಕಾಂತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ, ತೆಂಕನಿಡಿಯೂರು ಗ್ರಾಮದ ನಿವಾಸಿ ಚಂದ್ರಕಾಂತ್‌ (54) ಎಂಬವರು ದಿನಾಂಕ 22-10-2026 ರಂದು ಕೆಲಸ ಮುಗಿಸಿ ರಾತ್ರಿ 10:30 ಗಂಟೆಗೆ ತೆಂಕನಿಡಿಯೂರು ಗ್ರಾಮದ ತೊಟ್ಟಂನ ಮನೆಗೆ ಬಂದಾಗ ಚಂದ್ರಕಾಂತ್ ಅವರ ಅಣ್ಣನ ಅಂಗಡಿಯ ಬಳಿ 5 ರಿಂದ 6 ಜನರು ಸಿಗರೇಟ್‌ ಸೇದುತ್ತಿದ್ದಾಗ ಚಂದ್ರಕಾಂತ್ ರವರು ಅಣ್ಣನಾದ ರವಿ ಪ್ರಕಾಶ್‌ ರವರಿಗೆ ಅಂಗಡಿ ಎದುರಿಗೆ 5-6 ಜನರಿಗೆ ಏಕೆ ಇರಿಸಿಕೊಂಡಿದ್ದೀರಿ ಎಂದು ಕೇಳಿದಾಗ ಚಂದ್ರಕಾಂತ್ ರ ಅಣ್ಣನ ಮಗ  ಆಶ್ರತ್‌ ರಾವ್‌ ನು ಚಂದ್ರಕಾಂತ್ ರನ್ನು ಉದ್ದೇಶಿಸಿ ಬೈದಿದ್ದು, ನಂತರ ಚಂದ್ರಕಾಂತ್ ರವರು ಮನೆಗೆ ಹೋಗಿ ಜಗಲಿ ಮೇಲೆ ಕುಳಿತಿರುವಾಗ 3 ಜನ ಸೇರಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅದರಲ್ಲಿ ಆಶ್ರಿತ್‌ ರಾವ್‌ ಕಟ್ಟಿಗೆಯಿಂದ ಹಲ್ಲೆಮಾಡಿದ್ದು ಇದರಿಂದ ಚಂದ್ರಕಾಂತ್ ರವರ ಕುತ್ತಿಗೆಗೆ ಹಾಗೂ ಎಡ ಭುಜಕ್ಕೆ ತರಚಿದ ಗಾಯವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 119/2026 ಕಲಂ: 115,329,352,351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!