IMG_20261024_190512.png
Spread the love

ಉಡುಪಿ: ದಿನಾಂಕ:24-10-2026(ಹಾಯ್ ಉಡುಪಿ ನ್ಯೂಸ್) ಜಾಮೀಯಾ ಮಸೀದಿ ಉಡುಪಿಯ ಕಾರ್ಯದರ್ಶಿಯವರಿಗೆ ಐವರು ವ್ಯಕ್ತಿಗಳು ಮಸೀದಿಯ ಒಳಗಡೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಜಾಮೀಯಾ ಮಸೀದಿ ಉಡುಪಿಯ ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಜೀಜ್ ಎಂಬವರಿಗೆ ದಿನಾಂಕ 9-10-2026 ರಂದು ಶುಕ್ರವಾರ ಮಧ್ಯಾಹ್ನ ಜುಮಾ ನಮಾಝ್ ನಂತರ ಸುಮಾರು ಮಧ್ಯಾಹ್ನ 1:45ಕ್ಕೆ  ಜಾಮಿಯಾ ಮಸೀದಿ ಉಡುಪಿಯ ಒಳಗಡೆ ಆರೋಪಿಗಳಾದ 1. ನಝೀರ್ ಅಹ್ಮದ್ 2. ಶಂಶುದ್ದೀನ್ 3. ಹನೀಫ್ 4. ಬಶೀರ್ ಅಬ್ದುಲ್ ರಹಮಾನ್ 5. ಅಝರ್ ಎಂಬವರು ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು ಹಲ್ಲೆ ನಡೆಸಿದ್ದು, ಮಸೀದಿಯ ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಜೀಜ್ ಅವರ  ಮುಖ ತಲೆ ಹಾಗೂ ಮೂಗಿನ ಭಾಗಕ್ಕೆ ನೇರವಾಗಿ ಬಲವಾಗಿ ಹೊಡೆದಿರುವುದಲ್ಲದೇ ಖಾಲೀದ್ ಅಬ್ದುಲ್ ಅಜೀಜ್ ರವರು ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಆರೋಪಿತರಿಂದ ತಪ್ಪಿಸಿಕೊಂಡು ಮಸೀದಿಯ ಒಳಾಂಗಣದ ಕಡೆಗೆ ಓಡಿದಾಗಲೂ ಆರೋಪಿತರು ಮತ್ತು ಅವನ ಗೂಂಡಾಪಡೆ ಬೆನ್ನಟ್ಟಿ ಹಿಡಿದು ಮತ್ತೆ ಖಾಲೀದ್ ಅಬ್ದುಲ್ ಅಜೀಜ್ ರವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನಗೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಖಾಲೀದ್ ಅಬ್ದುಲ್ ಅಜೀಜ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 145/2026, ಕಲಂ: 352, 351(2), 118(1) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!