IMG-20261024-WA0028.jpg
Spread the love

ದಿನಾಂಕ:25-10-2026(ಹಾಯ್ ಉಡುಪಿ ನ್ಯೂಸ್)

ಉಡುಪಿ: ನಗರದಲ್ಲಿ 3 ವರ್ಷದ ಮಗುವಿನೊಂದಿಗೆ 29 ವರ್ಷದ ಮಹಿಳೆ ನಾಪತ್ತೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಉಡುಪಿ ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನಾಪತ್ತೆಯಾದ ಮಹಿಳೆ 29 ವರ್ಷ ವಯಸ್ಸಿನವರಾಗಿದ್ದು, ಅವರೊಂದಿಗೆ 3 ವರ್ಷದ ಗಂಡು ಮಗು ಇದೆ. ಮಹಿಳೆಯ ಎತ್ತರ ಸುಮಾರು 4 ಅಡಿ 10 ಇಂಚುಗಳಾಗಿದ್ದು, ಕಪ್ಪು ಕೂದಲು ಹೊಂದಿದ್ದಾರೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 144/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆ ಮತ್ತು ಮಗುವಿನ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮಹಿಳೆ ಹಾಗೂ ಮಗುವಿನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಅಥವಾ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

error: No Copying!