IMG_20261011_163743.png
Spread the love

ಹೆಬ್ರಿ: ದಿನಾಂಕ:11/10/2026 (ಹಾಯ್ ಉಡುಪಿ ನ್ಯೂಸ್) ಮುದ್ರಾಡಿ ಗ್ರಾಮದ ಶೆಟ್ಟಿಗಾರ ಸಮಾಜ ಭವನ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರ ಎ.ಕೆ ಅವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರ ಎ.ಕೆ ಅವರಿಗೆ ದಿನಾಂಕ :10-10-2026 ರಂದು ಮುದ್ರಾಡಿ ಗ್ರಾಮದ ಶೆಟ್ಟಿಗಾರ ಸಮಾಜ ಭವನ ಬಳಿ ರಸ್ತೆಯ ಬದಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜುಗಾರಿ ಎಂಬ ಜುಗಾರಿ ಅಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ದೊರೆತಿದೆ .

ಮಾಹಿತಿಯ ಪ್ರಕಾರ ಪಿ,ಎಸ್‌.ಐ ಯವರು ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡಿ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪಿತನಾದ ಹರೀಂದ್ರ (42) ಗರಡಿ ಬಾಕ್ಯಾರು ಯರ್ಲಪ್ಪಾಡಿ ಬೈಲೂರು ಗ್ರಾಮದ ನಿವಾಸಿ ಎಂಬವರನ್ನು ಬಂಧಿಸಿ ಅವರಿಂದ ನಗದು 960/-ರೂ, ಮಟ್ಕಾ ನಂಬ್ರ ಬರೆದ – ಚೀಟಿ ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧಿನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 52/2026 US 78(I)(iii) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!