IMG_20261011_173933.png
Spread the love

ಹಿರಿಯಡ್ಕ: ದಿನಾಂಕ:11-10-2026(ಹಾಯ್ ಉಡುಪಿ ನ್ಯೂಸ್) ಗೂಡ್ಸ್ ಟೆಂಪೋ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿದ್ದ ವ್ಯಕ್ತಿಗಳನ್ನು ಹಿರಿಯಡ್ಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹರಿಖಂಡಿಗೆ ಕಡೆಯಿಂದ ಹಿರಿಯಡಕ ಕಡೆಗೆ KA-20-AA-5197 ನೇ ಗೂಡ್ಸ್‌ ಟೆಂಪೋ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡಿಕೊಂಡು ಬರುತ್ತಿರುವುದಾಗಿ ದಿನಾಂಕ:09-10-2026 ರಂದು ಸಾರ್ವಜನಿಕ ಮಾಹಿತಿ ಬಂದ ಮೇರೆಗೆ ಹಿರಿಯಡ್ಕ ಪೊಲೀಸ್ ಠಾಣಾ ಸಿಬ್ಬಂದಿಯವರು ಹಿರಿಯಡ್ಕ ಠಾಣೆಯ ಎದುರು ಜಂಕ್ಷನ್‌ ಬಳಿ KA-20-AA-5197 ಟೆಂಪೋವನ್ನು ತಡೆದು ನಿಲ್ಲಿಸಿ ನೋಡಿದಾಗ ವಾಹನದ ಒಳಗೆ ಒಟ್ಟು 4 ಜಾನುವಾರುಗಳು ಇದ್ದವು. ವಾಹನದ ಚಾಲಕ ಸೇರಿ ಇಬ್ಬರು ವ್ಯಕ್ತಿಗಳಿದ್ದರು.

ಪೊಲೀಸರು ವಾಹನದಲ್ಲಿ ಇದ್ದವರ ಹೆಸರು ವಿಳಾಸ ವಿಚಾರಿಸಿದಾಗ ಅವರ ಪೈಕಿ ಒಬ್ಬನು 1) ಅಬ್ದುಲ್‌ ಸತ್ತರ್‌ (54), ಚಾಲಕ 2) ಯೋಗೀಶ ನಾಯ್ಕ್‌ (49), ಅಂತಲೂ ಮತ್ತು ವಾಹನ ತನ್ನದೇ ಆಗಿರುತ್ತದೆ ಎಂದು ಹೇಳಿರುತ್ತಾನೆ. ವಾಹನದ ಒಳಗೆ ಇದ್ದ ಜಾನುವಾರುಗಳ ಬಗ್ಗೆ ವಿಚಾರಣೆ ಮಾಡಿದಾಗ ಜಾನುವಾರುಗಳನ್ನು ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಎಂಬುವವರ ಮನೆಯ ಹತ್ತಿರ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ನಾವು ತಂದಿದ್ದ ಪಿಕಪ್‌ ಗೂಡ್ಸ್ ವಾಹನದಲ್ಲಿ ಕಸಾಯಿಖಾನೆಗೆ ಮಾರಾಟ ಮಾಡಲು ಕೊಂಡು ಹೋಗುವುದಾಗಿಯೂ ತಿಳಿಸಿರುತ್ತಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಅಪರಾಧ ಕ್ರಮಾಂಕ 59/2026 ಕಲಂ: 303(2) BNS & ಕಲಂ:11(1) ಡಿ ಪ್ರಾಣಿಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು ಸೆಕ್ಷನ್ 4, 5, 7,12 ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!