file_00000000d0e88211a138e9d838d48822.png
Spread the love

ಉಡುಪಿ: ದಿನಾಂಕ:09-10-2026 (ಹಾಯ್ ಉಡುಪಿ ನ್ಯೂಸ್) 76 ಬಡಗಬೆಟ್ಟು ನಿವಾಸಿ ಯೋರ್ವರ ಬ್ಯಾಂಕ್ ಖಾತೆಯಿಂದ ಯಾರೋ ಸೈಬರ್ ವಂಚಕರು ಹಣವನ್ನು ಎಗರಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

76 ಬಡಗು ಬೆಟ್ಟು ನಿವಾಸಿ ಮಾಧವ ರಾವ್‌ ಅರ್‌ ವಿ  (61) ಎಂಬವರು ಕೆನರಾ ಬ್ಯಾಂಕ್‌ ಉಡುಪಿಯಲ್ಲಿ ಖಾತೆದಾರರಾಗಿದ್ದು  ದಿನಾಂಕ: 06/10/2026 ರಂದು  ಮಾಧವ ರಾವ್ ಆರ್ ವಿ ರವರ ಖಾತೆಯಿಂದ  ಅವರಿಗೆ ತಿಳಿಯದೆ 55,000/- ರೂ ಹಣ ಕಡಿತಗೊಂಡಿರುತ್ತದೆ. ನಂತರ ದಿನಾಂಕ: 07/10/2026 ರಂದು 1,00,000/- ಹಣ ಕಡಿತಗೊಂಡಿರುತ್ತದೆ. ಒಟ್ಟು ಮಾಧವ ರಾವ್ ಆರ್ ವಿ ರವರ ಖಾತೆಯಿಂದ 1,55,000/- ರೂ ಅವರಿಗೆ ತಿಳಿಯದೆ ಕಡಿತಗೊಂಡಿರುತ್ತದೆ.

ಯಾರೋ ಸೈಬರ್‌ ವಂಚಕರು ಮಾಧವ ರಾವ್ ಆರ್ ವಿ ರವರ ಖಾತೆಯಿಂದ ಹಣವನ್ನು ತೆಗೆದು ಮೋಸ ವಂಚನೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

 ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 139/2026 ಕಲಂ:  66 IT  ACT 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!