IMG_20261009_203626.png
Spread the love

ಮಣಿಪಾಲ: ದಿನಾಂಕ: 09/10/2026 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಎದುರು  ಸಾರ್ವಜನಿಕ ಸ್ಥಳದಲ್ಲಿ ಕಾರಿನಲ್ಲಿ ಮದ್ಯಪಾನ ಮಾಡುತ್ತಿದ್ದ ನಾಲ್ವರು ಯುವಕರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ ಬಿ ಎನ್ ಅವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ ಬಿ ಎನ್, ಅವರು ದಿನಾಂಕ :08-10-2026 ರಂದು ಠಾಣೆಯಲ್ಲಿರುವಾಗ ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಎದುರು ಸಾರ್ವಜನಿಕ ಸ್ಥಳದಲ್ಲಿ ಕಾರಿನಲ್ಲಿ ಕೆಲವು ವ್ಯಕ್ತಿಗಳು ಬಂದು ಕಾರಿನ ಎರಡು ಡೋರ್‌ಗಳನ್ನು ತೆಗೆದು ಮದ್ಯಪಾನ ಮಾಡುತ್ತಿರುವುದಾಗಿ ಸಾರ್ವಜನಿಕ ಮಾಹಿತಿ ಬಂದಂತೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಎದುರು ಸಾರ್ವಜನಿಕ ಸ್ಥಳದಲ್ಲಿ ಕಾರಿನ ಎರಡು ಡೋರ್‌ಗಳನ್ನು ತೆಗೆದು ಕೆಲವು ವ್ಯಕ್ತಿಗಳು ಅದರಲ್ಲಿ ಮದ್ಯಪಾನ ಮಾಡುತ್ತಿದ್ದು ಈ ಬಗ್ಗೆ ಪೊಲೀಸರು ಅವರನ್ನು ಸುತ್ತುವರಿದು ಹಿಡಿದಿದ್ದು ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರ ಹೆಸರು ವಿಳಾಸ 1.ರಾಹುಲ್, 2.ಅಖಿಲ್ ಕುಂದರ್ , 3.ಮನುಷ್ ರಾಮ್ , 4. ರಕ್ಷಿತ್ ಎಂದು ತಿಳಿಸಿದ್ದು ಆರೋಪಿಗಳು  ಪಾನಮತ್ತ ಸ್ಥಿತಿಯಲ್ಲಿ ಕಾಣಿಸಿಕೊಂಡಿರುತ್ತಾರೆ.

ಆರೋಪಿಗಳು ದಾಳಿ ಸಮಯದಲ್ಲಿ ಸಾರ್ವಜನಿಕ ಕರ್ತವ್ಯ ನಿರ್ವಹಿಸುವಾಗ ವಾಗ್ವಾದ ಮಾಡಿ ಉಡಾಪೆ ಮಾತಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಅಲ್ಲದೆ ದಾಳಿ ಸಮಯದಲ್ಲಿ ಇಬ್ಬರು ತಪ್ಪಿಸಿಕೊಂಡಿರುತ್ತಾರೆ. ನಂತರ KA-19-MQ-9111 ನೇ ಮಹೇಂದ್ರಾ & ಮಹೇಂದ್ರಾ ಕಂಪನಿಯ ಸ್ಕಾರ್ಪಿಯೋ ಕಾರನ್ನು ಹಾಗೂ ಕಾರಿನ ಹಿಂಬದಿ ಸೀಟಿನಲ್ಲಿ ಕಾರ್ಲ್ಸ್ ಬರ್ಗ್ ಎಲಿಪೆಂಟ್ ಸ್ಟ್ರಾಂಗ್ ಸೂಪರ್ ಪ್ರೀಮಿಯಂ ಬಿಯರ್ ಎಂದು ಬರೆದ ಬಿಯರ್ ಇರುವ 2 ಬಾಟಲಿಗಳು ಮತ್ತು ಅರ್ಧ ತುಂಬಿದ 1 ಬಾಟಲಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 164/2026 ಕಲಂ:15(A) KE ACT & 221, 355 BNS  ರಂತೆ ಪ್ರಕರಣ ದಾಖಲಾಗಿಯದೆ. 

error: No Copying!