IMG_20261006_224403.png
Spread the love

ಕೋಟ : ದಿನಾಂಕ : 06/10/2026 (ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರ ಗಿಳಿಯಾರು ಗ್ರಾಮದ ನಿವಾಸಿ ಆರತಿ ಗಿಳಿಯಾರು ಎಂಬವರಿಗೆ ರಿಕ್ಷಾ ಚಾಲಕ ಮಂಜ ಎಂಬವ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರ,ಗಿಳಿಯಾರು ಗ್ರಾಮದ ನಿವಾಸಿ ಆರತಿ ಗಿಳಿಯಾರು (31) ಎಂಬವರು ದಿನಾಂಕ : 04-10-2026 ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ 1 ನೇ ಆರೋಪಿ ಮಂಜುನಾಥ ಯಾನೆ ರಿಕ್ಷಾ ಮಂಜ ಎಂಬವ ದಾರಿಗೆ ಅಡ್ಡಲಾಗಿ ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡಿದ್ದು ಆ ಸಮಯ ಆರತಿ ಗಿಳಿಯಾರು ರವರು ನೀನು ಗಾಡಿಯನ್ನು ತೆಗಿ ನಾನು ಹೊರಡಬೇಕು ಎಂದಾಗ 1 ನೇ ಆರೋಪಿಯು ರಿಕ್ಷಾವನ್ನು ತೆಗೆಯದೇ ಅಡ್ಡಗಟ್ಟಿ ಹಲ್ಲೆ ಮಾಡಿರುತ್ತಾನೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾನೆ .

ಅಷ್ಟರಲ್ಲಿ ಅಲ್ಲಿಗೆ ಬಂದ 1 ನೇ ಆರೋಪಿಯ ಹೆಂಡತಿ ಜಯ ಹಾಗೂ ನಾಗರಾಜ ಎಂಬವರು ಆರತಿ ಗಿಳಿಯಾರು ರಿಗೆ ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/2026 ಕಲಂ:126(2), 74, 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

ಇದೇ ಪ್ರಕರಣದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಜಯ ಎಂಬವರು ಆರತಿ ಗಿಳಿಯಾರು ಎಂಬವರ ವಿರುದ್ಧ ಪ್ರತಿ ದೂರು ನೀಡಿದ್ದಾರೆ.

ಕೋಟ: ದಿನಾಂಕ :06/10/2026 ಮೂಡು ಗಿಳಿಯಾರು ಕೋಳಿ ಫಾರಂ ಹತ್ತಿರ ರಿಕ್ಷಾ ದುರಸ್ತಿ ಮಾಡುತ್ತಿದ್ದ ರಿಕ್ಷಾ ಚಾಲಕನಿಗೆ ಮತ್ತು ಆತನ ಪತ್ನಿ ಗೆ ಇಬ್ಬರು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರ ಗಿಳಿಯಾರು ಗ್ರಾಮದ ನಿವಾಸಿ ಜಯ (42), ಎಂಬವರು ದಿನಾಂಕ:04-10-2026 ರಂದು ಗಂಡನ ಅಟೋ ರಿಕ್ಷಾದಲ್ಲಿ ಮನೆ ಕಡೆಗೆ ಹೋಗುತ್ತಿರುವಾಗ ಬ್ರಹ್ಮಾವರ ತಾಲೂಕು ಗಿಳಿಯಾರು ಗ್ರಾಮದ ಮೂಡುಗಿಳಿಯಾರು ಕೋಳಿ ಫಾರಂ ಹತ್ತಿರ ಬರುತ್ತಿರುವಾಗ ಅಟೋ ರಿಕ್ಷಾ ಇಂಜಿನ್ ದೋಷದಿಂದ ನಿಂತುಕೊಂಡಿದ್ದು ಆ ಸಮಯ ಜಯರವರ ಗಂಡ ರಿಕ್ಷಾದ ಇಂಜಿನ್ ಸರಿಪಡಿಸುತ್ತಿರುವಾಗ 1 ನೇ ಆರೋಪಿತೆ ಆರತಿ ಗಿಳಿಯಾರು ಅಟೋ ರಿಕ್ಷಾದ ಬಳಿ ಬಂದು ಅವಾಚ್ಯವಾಗಿ ಬೈದು ಅಟೋ ರಿಕ್ಷಾ ತೆಗಿ ಎಂದು ಹೇಳಿದಾಗ ರಿಕ್ಷಾ ಹಾಳಾಗಿದ್ದರಿಂದ ಇಲ್ಲಿ ನಿಲ್ಲಿಸಿರುತ್ತೇನೆ ರಸ್ತೆ ಬ್ಲಾಕ್ ಆಗಿಲ್ಲ ನೀನು ಸೈಡಿನಿಂದ ಹೋಗಬಹುದಲ್ಲಾ ಎಂದು ಹೇಳಿದಾಗ ಆರೋಪಿತೆ ಆರತಿ ಗಿಳಿಯಾರು ಳು ಜಯರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ನಿಂದಿಸಿರುತ್ತಾಳೆ .

ಆರೋಪಿ ಸಂಜೀವ ಎಂಬವ ಹಲ್ಲೆ ಮಾಡಿದ್ದಾರೆ .ಹಾಗೂ ಆರೋಪಿಗಳಿಬ್ಬರೂ ಜಯರವರ ಗಂಡನನ್ನು ಉದ್ದೇಶಿಸಿ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 153/2026 ಕಲಂ:74 115(2),118, 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!