ಬೆಂಗಳೂರು: ದಿನಾಂಕ:06-10-2026 (ಹಾಯ್ ಉಡುಪಿ ನ್ಯೂಸ್) ಏಷ್ಯನ್ ಗೇಮ್ಸ್-2026ರ ಕ್ರೀಡಾ ಸಾಧಕರಿಗೆ ಕರ್ನಾಟಕ ಸರ್ಕಾರದಿಂದ ಐತಿಹಾಸಿಕ ಬೆಂಬಲವನ್ನು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಘೋಷಿಸಿದ್ದಾರೆ.
ಪದಕ ವಿಜೇತರ ನಗದು ಪುರಸ್ಕಾರವನ್ನು ಹೆಚ್ಚಿಸಲಾಗಿದ್ದು, ಚಿನ್ನದ ಪದಕ ಗೆದ್ದವರಿಗೆ ₹1 ಕೋಟಿ, ಬೆಳ್ಳಿ ವಿಜೇತರಿಗೆ ₹75 ಲಕ್ಷ ಹಾಗೂ ಕಂಚಿನ ಪದಕ ಗಳಿಸಿದವರಿಗೆ ₹50 ಲಕ್ಷ ಘೋಷಿಸಲಾಗಿದೆ. ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಎಲ್ಲಾ 20 ಕ್ರೀಡಾಪಟುಗಳಿಗೂ ತಲಾ ₹5 ಲಕ್ಷ ಮತ್ತು ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾದವರಿಗೆ ತರಬೇತಿಗಾಗಿ ತಲಾ ₹10 ಲಕ್ಷ ಪ್ರೋತ್ಸಾಹಧನವನ್ನು ಸರ್ಕಾರ ಮಂಜೂರು ಮಾಡಿದೆ.
