Spread the love

ಗಂಗೊಳ್ಳಿ: ಜೂನ್ ೧೩(ಹಾಯ್ ಉಡುಪಿ ನ್ಯೂಸ್) ಪ್ರೀತಿಸಿದವ ಮದುವೆಯಾಗಲು ಹಣದ ಬೇಡಿಕೆ ಇಟ್ಟು ಇದೀಗ ಎಲ್ಲಾ ಆದ ಮೇಲೆ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಕುಂದಾಪುರ ತಾಲೂಕು , ಗಂಗೊಳ್ಳಿ ಗ್ರಾಮ,ಕೆನರಾ ಬ್ಯಾಂಕ್ ಹತ್ತಿರ ನಿವಾಸಿ ಶ್ರೀಮತಿ ಜಿ. ಸುಚಿತಾ ಶೆಣೈ (೩೪) ಹಾಗೂ ವಿಜೇತ ಕುಲಾಲ್ (35) ಇವರು ಪರಸ್ಪರ ಪ್ರೀತಿಸಿ ಎರಡೂ ಕುಟುಂಬದವರ ಒಪ್ಪಿಗೆ ಪಡೆದು ದಿನಾಂಕ 08/05/2017 ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಮಹಾಲಕ್ಷ್ಮೀ , ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆಯ ಮಾತುಕತೆಯು ಹುಡುಗಿಯ ಮನೆಯಾದ ಗಂಗೊಳ್ಳಿಯಲ್ಲಿ ನಡೆದಿದ್ದು ಆ ಸಮಯದಲ್ಲಿ  ಕಲ್ಯಾಣ ನಗರ,ಟಿ.ದಾಸರಹಳ್ಳಿ, ಬೆಂಗಳೂರು-57 ಇಲ್ಲಿನ ನಿವಾಸಿಗಳಾದ 1) ವಿಜೇತ ಕುಲಾಲ್, 2) ಕೆ.ಎಸ್. ರಾಜು ಕುಲಾಲ್, 3) ಸರೋಜ ಕುಲಾಲ್, 4) ಪ್ರದೀಪ ಕುಲಾಲ್‌ ಇವರು ಸುಚಿತಾ ಶೆಣೈಯವರ ತಂದೆಯವರಲ್ಲಿ ಚಿನ್ನಾಭರಣ ಹಾಗೂ 25 ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದು ಇದಕ್ಕೆ ಯುವತಿಯ ತಂದೆ ನಿರಾಕರಿಸಿದ್ದು ಹುಡುಗನ ಕಡೆಯವರು ಮದುವೆ ಮುರಿದುಕೊಳ್ಳುವುದಾಗಿ ಹೇಳಿದ್ದರಿಂದ ಯುವತಿಯ ತಂದೆ ಬೇರೆ ದಾರಿ ಕಾಣದೆ 25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ವರನಿಗೆ ಹಾಗೂ 67 ಗ್ರಾಂ ಚಿನ್ನಾಭರಣವನ್ನು ವರನಿಗೆ ನೀಡಿ ಮದುವೆಯ ಸಂಪೂರ್ಣ ಖರ್ಚುವೆಚ್ಚವನ್ನು ಯುವತಿಯ ತಂದೆಯವರೇ ಭರಿಸಿ ಮದುವೆ ಮಾಡಿ ಕೊಟ್ಟಿದ್ದು ಮದುವೆ ನಂತರ ಯುವತಿಯು ಗಂಡನ ಮನೆ ಯವರೊಂದಿಗೆ ಬೆಂಗಳೂರಿನ ತುರುಬರಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ಸಮಯದಲ್ಲಿ ಗಂಡನ ಮನೆ ಯವರು ಸುಚಿತಾ ಶೆಣೈರಿಗೆ  ಚಿನ್ನಾಭರಣ,ಆಸ್ತಿ, ಕಾರು ಹಾಗೂ ನಾವು ಕೇಳಿದಷ್ಟು ವರದಕ್ಷಿಣೆ ನೀಡಿಲ್ಲವಾಗಿ ಪದೇ ಪದೇ ಹಂಗಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಲ್ಲದೆ ಗಂಡನಾದ ವಿಜೇತ ಕುಲಾಲ್ ಸುಚಿತಾ ಶೆಣೈಯವರ ಬಳಿ ಇದ್ದ 25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಹಾಗೂ ಸುಚಿತಾರವರ ಉಳಿತಾಯದ ಹಣವನ್ನು ನೀಡುವಂತೆ ಮಾನಸಿಕ ಕಿರುಕುಳ ನೀಡಿ ಬಲಾತ್ಕಾರವಾಗಿ ಹಣವನ್ನು ತೆಗೆದುಕೊಂಡಿರುತ್ತಾನೆ ಎಂದಿದ್ದಾರೆ.

ನಂತರ ಆಕೆ ಗರ್ಭಿಣಿಯಾಗಿದ್ದು ಆ ಸಮಯದಲ್ಲಿಯೂ ಗಂಡ ಹಾಗೂ ಆತನ ಮನೆಯವರು ಸುಚಿತಾರವರಿಗೆ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎಂದು ದೂರಿದ್ದಾರೆ.. ದಿನಾಂಕ 23/08/2018 ರಂದು ಸುಚಿತಾರಿಗೆ ಹೆಣ್ಣು ಮಗು ಜನಿಸಿದ್ದು ಸುಚಿತಾರವರು ಹೆರಿಗೆ ರಜೆಯಲ್ಲಿ ಇರುವ ಸಮಯದಲ್ಲಿಯೂ ಗಂಡನು ಸುಚಿತಾಳಿಗೆ ಕೆಲಸಕ್ಕೆ ಹೋಗು ಹೋಗದಿದ್ದಲ್ಲಿ ಡೈಪೋರ್ಸ್‌ ಕೊಡುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ. ಅಲ್ಲದೇ ಗಂಡ ವಿದೇಶಕ್ಕೆ ಕೆಲಸಕ್ಕೆ ಹೋದ ಸಮಯದಲ್ಲಿ ಗಂಡನ ಮನೆಯವರು ಸುಚಿತಾರಿಗೆ ಮನೆಬಿಟ್ಟು ಹೋಗುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ. ನಂತರ ಸುಚಿತಾರವರು ಗಂಡನ ಮನೆ ಯವರು ನೀಡುವ ಹಿಂಸೆಯನ್ನು ತಾಳಲಾರದೆ 2020 ನೇ ಇಸವಿಯ ಸೆಪ್ಟೆಂಬರ್‌ ತಿಂಗಳಲ್ಲಿ ತವರು ಮನೆಯಾದ ಗಂಗೊಳ್ಳಿಗೆ ಬಂದು ವಾಸಮಾಡಿಕೊಂಡಿದ್ದು ಆ ಸಮಯದಲ್ಲಿಯೂ ಸಹ ಗಂಡನಾದ ವಿಜೇತ ಕುಲಾಲ್ ಸುಚಿತಾರವರ ತಂದೆಗೆ ಫೋನ್‌ ಕರೆ ಮಾಡಿ ಕಿರುಕುಳ ನೀಡಿದ್ದಲ್ಲದೇ 2020 ನೇ ಡಿಸೆಂಬರ್‌ ಹಾಗೂ 2021 ನೇ ಜನವರಿ ತಿಂಗಳಲ್ಲಿ ಸುಚಿತಾರವರ ಮನೆಯಾದ ಗಂಗೊಳ್ಳಿಗೆ ಬಂದು ಸುಚಿತಾರಿಗೆ ಅವಾಚ್ಯಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾನೆ. ನಂತರ ದಿನಾಂಕ 04/06/2022 ರಂದು ಸುಮಾರು 11:30 ಗಂಟೆಗೆ ಸುಚಿತಾರ ತಂದೆಯವರು ಗಂಗೊಳ್ಳಿ ಕಾಲೇಜು ರಸ್ತೆಯಲ್ಲಿ ಹೋಗುತ್ತಿರುವಾಗ ವಿಜೇತ ಕುಲಾಲ್ ತನ್ನ ಹೆಂಡತಿಯ ತಂದೆಗೆ ಅವಾಚ್ಯ ಶಬ್ಧಗಳಿಂದ ಬೈದು ಮಗುವನ್ನು ನನ್ನೊಂದಿಗೆ ಕಳುಹಿಸದಿದ್ದಲ್ಲಿ ಸುಚಿತಾರನ್ನು ಹಾಗೂ ಅವರ ತಂದೆಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೀವೃ ಮಾನಸಿಕ ಹಿಂಸೆ ನೀಡಿರುತ್ತಾನೆ ಎಂದು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.    

error: No Copying!